ದಿ.ಸುಖಾನಂದ ಶೆಟ್ಟಿ ಹಿಂದೂ ಸಮಾಜಕ್ಕೆ ಮಾದರಿ ನಾಯಕ-ದಿನೇಶ್ ಪುತ್ರನ್
19 ವರ್ಷಗಳ ಹಿಂದೆ ಮತಾಂತರ ಷಡ್ಯಂತ್ರಕ್ಕೆ ಬಲಿಯಾದ ಮೂಲ್ಕಿಯ ಹಿಂದೂ ಸಂಘಟನೆಯ ನಾಯಕರದ ಸುಖಾನಂದ ಶೆಟ್ಟಿ, ದಿನೇಶ್ ಅಮೀನ್ ಹಾಗೂ ಪ್ರೇಮನಾಥ್ ಕೋಟ್ಯಾನ್ ಸಂಸ್ಮರಣ ಕಾರ್ಯಕ್ರಮ ಮುಲ್ಕಿ ನಗರ ಹಾಗೂ ಎಸ್ ಎಸ್ ಫ್ರೆಂಡ್ಸ್ ವತಿಯಿಂದ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತೀಯ ಜನತಾ ಪಾರ್ಟಿಯ ಮೂಲ್ಕಿ ಮೂಡಬಿದಿರೆಯ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಮಾತನಾಡಿ ಸುಖಾನದ ಶೆಟ್ಟಿ, ಜಾತಿ ಮತ ಭೇದವಿಲ್ಲದೆ ಹುಟ್ಟು ಹೋರಾಟಗಾರರಾಗಿದ್ದರು. ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಲು ಸುಖಾನಂದ ಶೆಟ್ಟಿ ಕಾರಣ. ಅವರ ನೆನಪು ಶಾಶ್ವತ. ಹಿಂದೂ ಸಮಾಜಕ್ಕಾಗಿ ಅವರು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ ಎಂದರು.
ಸಭೆಯಲ್ಲಿ ಬಿಜೆಪಿ ನಾಯಕರಾದ ಈಶ್ವರ ಕಟೀಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ದಿನೇಶ್ ಬಪ್ಪನಾಡು, ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸತೀಶ್ ಅಂಚನ್, ವಿನೋದ್ ಸಾಲಿಯನ್ ಬೆಳ್ಳಯಾರು, ಶ್ಯಾಮ್ ಪ್ರಸಾದ್, ನವೀನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.



0 Comments