ನೆಲ್ಲಿಕಾರಿನಲ್ಲಿ ಸೀರೆ ಗೊಂಡೆ ಹಾಕುವ ತರಬೇತಿ, ಮಾಸಿಕ ಸಂತೆ

ಜಾಹೀರಾತು/Advertisment
ಜಾಹೀರಾತು/Advertisment

 ನೆಲ್ಲಿಕಾರಿನಲ್ಲಿ ಸೀರೆ ಗೊಂಡೆ ಹಾಕುವ ತರಬೇತಿ, ಮಾಸಿಕ ಸಂತೆ

ಮೂಡುಬಿದಿರೆ : ನೆಲ್ಲಿಕಾರು ಪಂಚಾಯತ್ ನಲ್ಲಿ ಸೀರೆಗೆ ಗೊಂಡೆ ಹಾಕುವ ತರಬೇತಿಯ ಉದ್ಘಾಟನೆ ಮತ್ತು ಮಾಸಿಕ ಸಂತೆ ಬುಧವಾರ ನಡೆಯಿತು. ವಿಜಯ ಗ್ರಾಮೀಣ ಪ್ರತಿಷ್ಟಾನ ಮಂಗಳೂರು ಇದರ ಜ್ಯೋತಿರಾಜ್  ಅವರು ಉದ್ಘಾಟಿಸಿ ಮಾತನಾಡಿ

 ಮಹಿಳೆಯರು ಸ್ವ ಉದ್ಯೋಗ  ಮಾಡಲು ಹೆಚ್ಚಿನ  ಕೌಶಲ್ಯದ  ಅಗತ್ಯವಿದ್ದು  ವಿಆರ್ ಡಿಎಫ್ ಮಹಿಳೆಯರಿಗೆ  ಬೇಕಾದ ತರಬೇತಿ  ಹಾಗೂ ಬೆಂಬಲ  ನೀಡಲು  ಸದಾ ಸಿದ್ಧವಿದೆ  ಎಂದು ತಿಳಿಸಿದರು. 


 ಭಾರತೀಯ ವಿಕಾಸ  ಟ್ರಸ್ಟ್ ಮಣಿಪಾಲ ಇದರ ಜೀವನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರು ಸ್ವ ಉದ್ಯೋಗ  ಮಾಡುವುದರ  ಮೂಲಕ ಆರ್ಥಿಕವಾಗಿ ಸಬಲರಾಗ ಬಹುದು  ಎಂದು ತಿಳಿಸಿದರು.  ಗ್ರಾಮ ಪಂಚಾಯತ್  ಅಧ್ಯಕ್ಷ ಉದಯ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿ ಮಾತನಾಡಿ ಮಹಿಳೆ ಸ್ವಾವಲಂಬಿಯಾಗಲು ಇಂತಹ ಸಭೆಗಳಲ್ಲಿ ಭಾಗವಹಿಸಲು ಕರೆ ನೀಡಿದರು. 


ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಗ್ರಾಮ ಪಂಚಾಯತ್  ಸದಸ್ಯರು, ಪಂಚಾಯತ್  ಅಭಿವೃದ್ಧಿ ಅಧಿಕಾರಿ  ರಾಜು, ಎನ್.ಆರ್. ಎಲ್.ಎಂ ತಾಲೂಕು ವ್ಯವಸ್ಥಾಪಕ ನಿಖಿಲ್   ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್  ಕಾರ್ಯದರ್ಶಿ  ದಾಮೋದರ.  ಭ್ರಾಮರಿ ಒಕ್ಕೂಟದ  ಉಪಾಧ್ಯಕ್ಷ ಆಶಾ, ಒಕ್ಕೂಟದ ಎಲ್ಲಾ ಸದಸ್ಯರು,  ಅಂಗನವಾಡಿ, ಆಶಾ ಕಾರ್ಯಕ್ರತೆಯರು, ಸ್ತ್ರೀ ಶಕ್ತಿ ಮತ್ತು ಸಂಜೀವಿನಿ  ಸದಸ್ಯರು  ಕುಶಲ, ಸುಮಲತಾ  ಭಾಗವಹಿಸಿದ್ದರು. 

 ಮಾಸಿಕ  ಸಂತೆಗೆ  25 ಸಂಜೀವಿನಿ ಸಂಘದವರು   ತಾವು ಮನೆಯಲ್ಲಿ ಮಾಡಿದ  ಉತ್ಪನ್ನಗಳನ್ನು  ಮಾರಾಟಕ್ಕೆ ಇಟ್ಟಿದ್ದರು.  ಗೀತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments