ಹೈಕೋಟ್೯ ಪೀಠ ಸ್ಥಾಪನೆಗೆ ಮೂಡುಬಿದಿರೆಯಲ್ಲಿ ಪೋಸ್ಟ್ ಕಾಡ್೯ ಚಳುವಳಿ

ಜಾಹೀರಾತು/Advertisment
ಜಾಹೀರಾತು/Advertisment

 ಹೈಕೋಟ್೯ ಪೀಠ ಸ್ಥಾಪನೆಗೆ ಮೂಡುಬಿದಿರೆಯಲ್ಲಿ ಪೋಸ್ಟ್ ಕಾಡ್೯ ಚಳುವಳಿ 

ಮೂಡುಬಿದಿರೆ : ಮoಗಳೂರಿನಲ್ಲಿ ಹೈಕೋಟ್ ೯ ಪೀಠ ಸ್ಥಾಪಿಸಲು ಆಗ್ರಹಿಸಿ ವಕೀಲರ ಸಂಘ, ಪುರಸಭೆ, ಮೂಡುಬಿದಿರೆ ಪ್ರೆಸ್ ಕ್ಲಬ್ ಮತ್ತು ಸಾವ೯ಜನಿಕರಿಂದ ಮೂಡುಬಿದಿರೆಯಲ್ಲಿ ಗುರುವಾರ ಪೋಸ್ಟ್ ಕಾಡ್ ೯ ಚಳುವಳಿ ನಡೆಯಿತು.


   ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಅವರು ಮೊದಲಿಗರಾಗಿ ಪೋಸ್ಟ್ ಡಬ್ಬಕ್ಕೆ ಕಾಡ್ ೯ನ್ನು ಹಾಕಿ ಚಾಲನೆಯನ್ನು ನೀಡಿದರು. 

  ವಕೀಲರ ಸಂಘದ ಸ್ಥಾಪಕಾಧ್ಯಕ್ಷ, ಹಿರಿಯ ವಕೀಲ ಎಂ. ಬಾಹುಬಲಿ ಪ್ರಸಾದ್ ಚಳುವಳಿಯನ್ನುದ್ದೇಶಿಸಿ ಮಾತನಾಡಿ ಭಾರತದ ಬೆಳೆಯುತ್ತಿರುವ ನಗರದಲ್ಲಿ ಮಹತ್ವದ ಪಾತ್ರ ಕರಾವಳಿಯ ನಗರಗಳಲ್ಲಿದೆ. ದ.ಕ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಗಳ ಸುಮಾರು 1 ಕೋಟಿಯಷ್ಟು ಜನರಿಗೆ ಸಂಪಕ೯-ಸಂಚಾರ-ಸಂವಹನಕ್ಕೆ ಅನುಕೂಲವಾಗಲೆಂದು ಮಂಗಳೂರಿನಲ್ಲಿ ಹೈಕೋಟ್೯ ರಚಿಸಬೇಕೆಂದು ಹಲವು ವಷ೯ದಿಂದ ಹೋರಾಟ ನಡೆದು ಇದೀಗ ಎರಡು ವಷ೯ದಿಂದ ಹೆಚ್ಚಿನ ಬಲ ಸಿಕ್ಕಿದೆ. 

 ಮಂಗಳೂರಿನಲ್ಲಿ ಹೈಕೋಟ್೯ ಪೀಠಕ್ಕೆ ಜಾಗ ಗುರುತಿಸಲಾಗಿದೆ. ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಪೀಠಕ್ಕೆ ಒತ್ತಾಯಿಸಿ ಸರಕಾರಕ್ಕೆ ಮತ್ತು ಮುಖ್ಯ ನ್ಯಾಯಧೀಶರಿಗೆ ಪತ್ರ ಮುಖೇನ ತಿಳಿಸಲು ಚಳುವಳಿಯನ್ನು ಆರಂಭಿಸಲಾಗಿದೆ ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು. 

  ಸಾವ೯ಜನಿಕರ ನೆಲೆಯಲ್ಲಿ ಮಾತನಾಡಿದ ವಿಶ್ವ ಕುಮಾರ್ ಜನರ ಸಾವಿರಾರು ವ್ಯಾಜ್ಯಗಳು ನಡೆಯುತ್ತಿದ್ದು ಅವುಗಳ ನಿವ೯ಹಣೆಗೆ ಬೆಂಗಳೂರಿಗೇ ಹೋಗಬೇಕಾಗಿದೆ ಆದ್ದರಿಂದ ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾದರೆ ಜನರಿಗೆ ಅನುಕೂಲವಾಗುತ್ತದೆ ಎಂದರು. 

  ಹೈಕೋರ್ಟ್ ಪೀಠ ಹೋರಾಟ ಸಮಿತಿ ಕಾರ್ಯದರ್ಶಿ ಪ್ರವೀಣ್ ಲೋಬೋ, ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ಕಾಯ೯ದಶಿ೯ ಜಯಪ್ರಕಾಶ್, ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಜೊಸ್ಸಿ ಮಿನೇಜಸ್, ತಾಲೂಕು ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ವಕೀಲೆ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಮತ್ತಿತರರು ಈ ಸಂದಭ೯ದಲ್ಲಿದ್ದರು.

----------------------------

 ನನ್ನ ಅಜ್ಜ, ಮಾವ ಇದೀಗ ನಾನು ಕಳೆದ 48 ವಷ೯ಗಳಿಂದ ವ್ಯಾಜ್ಯ ನಿವ೯ಹಣೆಗೆ ಬೆಂಗಳೂರಿಗೆ ಹೋಗಿ ಬರುತ್ತಿದ್ದು ಇದು ತುಂಬಾ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಾ೯ಟಕ ಉಚ್ಛ ನ್ಯಾಯಾಲಯದ ಪೀಠವು ಮಂಗಳೂರಿನಲ್ಲಿ ಸ್ಥಾಪನೆಯಾದರೆ ಬೆಂಗಳೂರಿಗೆ ಹೋಗಿ ಬರುವುದು ತಪ್ಪುತ್ತದೆ ಹಲವು ಜನರ ಸಮಸ್ಯೆ ಕಡಿಮೆಯಾಗುತ್ತದೆ : ಪ್ರಕಾಶ್ ಗೌಡ ( ತಾ. ಪಂ. ಮಾಜಿ ಸದಸ್ಯ)

Post a Comment

0 Comments