ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಚಿಕಿತ್ಸೆಗೆ ನೆರವು

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 79ನೇ ಸೇವಾ ಯೋಜನೆಯ

ಅಕ್ಟೋಬರ್ ತಿಂಗಳ 1ನೇ ಯೋಜನೆಯನ್ನು ತಾಲೂಕಿನ ಮೂಡುಮಾರ್ನಾಡ್  ಗ್ರಾಮ ದ ಅನಾರೋಗ್ಯ ಹೊಂದಿರುವ ಸಂದೇಶ್ ಕುಮಾರ್ ಎಂಬವರ ಚಿಕಿತ್ಸೆಗೆ ರೂ. 10,000ನ್ನು ನೆರವು ನೀಡಲಾಯಿತು.

 ಸಂದೇಶ್ ಕುಮಾರ್ ಅವರು ಸಾಯಿ ಮಾನಾ೯ಡ್  ಸಂಘದ ಸದಸ್ಯರಾಗಿದ್ದು, ಅವರಿಗೆ   ಅಕ್ಟೋಬರ್ 5ರಂದು ಆಕ್ಸಿಡೆಂಟ್ ಆಗಿರುತ್ತದೆ. ಇವರ ಕೈ ಕಾಲು ಗಳಿಗೆ ಗಾಯವಾಗಿದ್ದು ಹೊಲಿಗೆ ಹಾಕಲಾಗಿದೆ. ಇದರಿಂದಾಗಿ ಸದ್ಯಕ್ಕೆ ಕೆಲಸಕ್ಕೆ ಹೋಗಲು ಆಗದೇ ಇರುವುದರಿಂದ ಔಷಧಿ  ಹಾಗೂ ಮನೆಯ ದೈನಂದಿನ ಖರ್ಚಿಗೆ ಹಣ ಹೊಂದಿಸಲು ಕಷ್ಟ  ಆಗಿರುವುದರಿಂದ  ಸೇವಾ ಸಂಘದಿಂದ 79ನೇ ಸೇವಾ ಯೋಜನೆಯ ರೂ ಹತ್ತು ಸಾವಿರದ ಚೆಕ್ಕನ್ನು ಭಾನುವಾರ (ಅ. 16)ದಂದು ಹಸ್ತಾಂತರಿಸಲಾಯಿತು.

Post a Comment

0 Comments