ಮೂಡುಬಿದಿರೆಯಲ್ಲಿ ಜೇಸಿ ಸಪ್ತಾಹ ಸಮಾರೋಪ: ವರುಣ್ ಅವರಿಗೆ " ಕಮಲ ಪತ್ರ" ಪುರಸ್ಕಾರ, ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಸಂಘ ಸಂಸ್ಥೆಗಳು ಯುವ ಶಕ್ತಿಯನ್ನು ಬಳಸಿಕೊಳ್ಳಬೇಕಾದರೆ ಅವರಲ್ಲಿ ಉತ್ತಮ ಆರೋಗ್ಯ, ಶಿಕ್ಷಣ, ಕೌಶಲ, ಜಾಗೃತಿ ಹಾಗೂ ಸೋಲನ್ನು ಎದುರಿಸುವ ಗಟ್ಟಿತನ ಅಗತ್ಯವಾಗಿ ಬೇಕು. ಆದರೆ ಇಂದಿನ ಯುವಜನತೆಯಲ್ಲಿ ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸರಿದಾರಿಗೆ ತರಲು ಜೇಸಿಯಂತಹ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೂಡುಬಿದಿರೆ ನ್ಯೂ ವೈಬ್ರೈಂಟ್ ವಿದ್ಯಾಸಂಸ್ಥೆಯ ಟ್ರಸ್ಟಿ, ವೇಣೂರು ಬ್ರೈಟ್ ಹರಿಜೋನ್ ಇಂಟರ್ನ್ಯಾಶನಲ್ ಸ್ಕೂಲ್ ಅಧ್ಯಕ್ಷ ಶರತ್ ಗೋರೆ ಹೇಳಿದರು.
ಅವರು ಜೆಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯ, ಜೇಸಿರೇಟ್, ಜ್ಯೂನಿಯರ್ ಜೇಸಿ ಸಹಯೋಗದಲ್ಲಿ ಸೋಮವಾರ ರಾತ್ರಿ ಸಮಾಜ ಮಂದಿರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೇಸಿ ಅಧ್ಯಕ್ಷೆ ವರ್ಷಾ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಜೇಸಿ ವರುಣ್ ಅವರಿಗೆ "ಕಮಲ ಪತ್ರ" ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಾಧಕರಿಗೆ ಸನ್ಮಾನ : ಸಾಧಕರಾದ ಪತ್ರಕರ್ತ ನವೀನ್ ಸಾಲ್ಯಾನ್, ಮಾರ್ನಾಡು ಅಂಬ್ಯುಲೆನ್ಸ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಅವರನ್ನು ಸನ್ಮಾನಿಸಲಾಯಿತು.
ಪೂರ್ವಾಧ್ಯಕ್ಷರಾದ ಮಹೇಂದ್ರವರ್ಮ ಜೈನ್ , ಮಹಮ್ಮದ್ ಆರೀಫ್, ಅಬುಲ್ ಅಲಾ ಪುತ್ತಿಗೆ, ಹಿರಿಯ ಸದಸ್ಯ ಅನಂತಕೀರ್ತಿ ಜೈನ್, ಪ್ರದೀಪ್ ಕುಮಾರ್, ಕಾರ್ಯದರ್ಶಿ ಶ್ರವಣ್ ಕುಮಾರ್, ಜೇಸಿರೆಟ್ ಅಧ್ಯಕ್ಷೆ ಸಹಾನ, ಜ್ಯೂನಿಯರ್ ಜೇಸಿ ಅಧ್ಯಕ್ಷ ಅವಿಝ್ ಉಪಸ್ಥಿತರಿದ್ದರು.
ಸಪ್ತಾಹದ ನಿರ್ದೇಶಕ ಸುಧಾಕರ ಶೆಟ್ಟಿ ಜೇಸಿ ಸಪ್ತಾಹದ ವರದಿ ವಾಚಿಸಿದರು. ಶಾಂತಲಾ ಆಚಾರ್ಯ, ಸುಪ್ರಿಯಾ, ಮಮತಾ, ಪ್ರಸನ್ನ ಕುಮಾರಿ ಸನ್ಮಾನಪತ್ರ ವಾಚಿಸಿದರು. ಉಮೇಶ್ ಭಟ್ ನಿರೂಪಿಸಿದರು.
ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಂ.ಜೆ ಸ್ಟೆಪ್ ಅಪ್ ಡಾನ್ಸ್ ಅಕಾಡೆಮಿ ಹಾಗೂ ಜೇಸಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 





 
 
 
0 Comments