ಯುವತಿಗೆ ನಿರಂತರ ಲೈಂಗಿಕ ದೌಜ೯ನ್ಯ : ಸಮಿತ್ ರಾಜ್ ವಿರುದ್ಧ ಯುವತಿ ಪೊಲೀಸರಿಗೆ ದೂರು
ಮೂಡುಬಿದಿರೆ : ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ ಎಂಬಾತ ತನ್ನನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿರುವುದಲ್ಲದೆ, ನಿರಂತರ ಲೈಂಗಿಕ ದೌಜ೯ನ್ಯ ಎಸಗಿರುವುದಾಗಿ ಆರೋಪಿಸಿ ಸಂತ್ರಸ್ತೆ ಯುವತಿಯೋವ೯ಳು ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.
2023ರಲ್ಲಿ ಸಂತ್ರಸ್ತೆಯ ಸಹೋದರನಿಗೆ ಬಜ್ಪೆಯಲ್ಲಿ ಅಪಘಾತವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದ ಸಂದಭ೯ ಸಂತ್ರಸ್ತೆಯ ಮನೆಯ ಆಥಿ೯ಕ ಪರಿಸ್ಥಿತಿಯನ್ನು ಆಸ್ಪತ್ರೆಗೆ ಬಂದಿದ್ದ ಗಮನಿಸಿ ಸಮಿತ್ ರಾಜ್ ನ ನಂಬರ್ ಕೊಟ್ಟು ಮಾತನಾಡಲು ಹೇಳಿದ್ದರು. ಅದರಂತೆ ಸಂತ್ರಸ್ತೆ ಆತನಿಗೆ ಕರೆ ಮಾಡಿ ಕಷ್ಟವನ್ನು ಹೇಳಿಕೊಂಡಿದ್ದಳು.ಬಳಿಕ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿ ಬಂದಿದ್ದರು.
ಇದಾದ ಬಳಿಕ ಸಮಿತ್ ರಾಜ್ ಸಂತ್ರಸ್ತೆಯ ಮೊಬೈಲ್ ಗೆ ಪದೇ ಪದೇ ಕರೆ ಮಾಡಿ ಮಾತನಾಡಿ ಪ್ರೀತಿ ಮಾಡುತ್ತಿದ್ದು ಮದುವೆಯಾಗುವುದಾಗಿ ಹೇಳಿದ್ದ ಇದರಿಂದ ಹೆದರಿದ ಯುವತಿ ಮನೆಯಲ್ಲಿ ಮಾತನಾಡುವಂತೆ ತಿಳಿಸಿದ್ದಳು.
ಈ ಬಗ್ಗೆ ಯುವತಿಯ ತಾಯಿ ಸಮಿತ್ ರಾಜ್ ಜೊತೆ ಮಾತನಾಡಿ ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲವೆಂದು ಹೇಳಿದ್ದರು.
ಆ ಬಳಿಕ ಯುವತಿ ಆತನೊಂದಿಗೆ ಹೋಗಲು ಒಪ್ಪದೆ ಇದ್ದಾಗ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಬೆದರಿಸುತ್ತಿದ್ದ ಅಲ್ಲದೆ ನಗ್ನ ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಕಾರಣ ನಗ್ನ ಫೋಟೋಗಳನ್ನು ಕಳುಹಿಸಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ.
ಆತನ ಕಿರುಕುಳ ಹೆಚ್ಚಾದಾಗ ಶಾಸಕರಲ್ಲಿ ಹೇಳುವುದಾಗಿ ಹೇಳಿದಾಗ ' ನಾನು ಪ್ರಭಾವಿ ವ್ಯಕ್ತಿಯಾಗಿದ್ದು, ಶಾಸಕರ ಆಪ್ತನಾಗಿದ್ದೇನೆ ಮತ್ತು ಶಾಸಕರು ನಾನು ಹೇಳಿದ ಹಾಗೆ ಕೇಳುತ್ತಾರೆ. ನಾನು ಹೇಳಿದರೆ ಸ್ಟೇಷನ್ ಗೂ ನನ್ನ ಜತೆ ಬರುತ್ತಾರೆ. ನನ್ನ ಜತೆ ಸಂಘಟನೆಯಿದೆ. ಯಾವ ಪೊಲೀಸರು ಏನೂ ಮಾಡಲು ಆಗುವುದಿಲ್ಲ ಎಂದು ಅವಾಚ್ಯ ಪದಗಳಿಂದ ನಿಂದಿಸಿ " ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸರು ಸಮಿತ್ ರಾಜ್ ವಿರುದ್ದ ಸೆ. 27ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 Comments