ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ*:
ಮಂಗಳೂರು: - ಮಠದಕಣಿ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 48ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಬುಧವಾರ (24-9-2025) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಮಖ್ಯ ಅಥಿತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ದ.ಕ ಜಿಲ್ಲಾ ಅಧ್ಯಕ್ಷೆ ಹಾಗೂ ವಕೀಲರಾದ ಡಾ. ಅಕ್ಷತಾ ಆದರ್ಶ್ ಮೂಡುಬಿದಿರೆ ಮತ್ತು ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ವಿಶ್ವನಾಥ್ ಶೆಟ್ಟಿಗಾರ , ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕರುಗಳಾದ ರೀಮಾ ಜಗನ್ನಾಥ್ ಮಾರ್ನಮಿಕಟ್ಟೆ , ವಿದುಷಿ ಪ್ರಾರ್ಥನಾ ರೋಹಿತ್ ಹೊಸಬೆಟ್ಟು , ವಂಸತ್ ಕುಮಾರ್, ಆಶಿಶ್ ಅಂಚನ್, ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .
ಪ್ರಿಯಾ ಸುದೇಶ್ ಕುಮಾರ್ ಮಂಗಳೂರು ನಿರೂಪಿಸಿದರು.ಗೌರವ್ ಶೆಟ್ಟಿಗಾರ, ಉಷಾ ಅಶೋಕ್, ಧಾತ್ರಿ, ಕೃತಿ ಸನಿಲ್, ಪ್ರೇರಣ ಜೆ,ಅಪೇಕ್ಷಾ ಎ , ಮೊದಲಾದವರು ಸಹಕರಿಸಿದರು.
0 Comments