ಚಿರತೆ ದಾಳಿಗೆ ಕರು ಬಲಿ
ಮೂಡುಬಿದಿರೆ : ಚಿರತೆಯೊಂದು ದನದ ಕರುವಿನ ಮೇಲೆ ದಾಳಿ ಮಾಡಿ ಅಧ೯ ಭಾಗವನ್ನು ತಿಂದು ಹಾಕಿದ ಘಟನೆ ಬೆಳುವಾಯಿಯಲ್ಲಿ ಮೂರು ದಿನಗಳ ಹಿಂದೆ ರಾತ್ರಿ ನಡೆದಿದೆ.
ಬೆಳುವಾಯಿ ಕಾನ ನಿವಾಸಿ ಗುಲ್ಜನ್ ಬಾನು ಎಂಬವರಿಗೆ ಸೇರಿದ ದನದ ಗಂಡು ಕರು ಕಾಡು ಪ್ರಾಣಿಗೆ ಬಲಿಯಾದದ್ದು.
ಈ ಬಗ್ಗೆ ಮೂಡುಬಿದಿರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
0 Comments