ಶಿರ್ತಾಡಿಯಲ್ಲಿ ಮಹಿಳೆಯರಿಗಾಗಿ 5 ದಿನಗಳ ಕೌಶಲ್ಯ ತರಬೇತಿ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಶಿರ್ತಾಡಿಯಲ್ಲಿ ಮಹಿಳೆಯರಿಗಾಗಿ 5 ದಿನಗಳ ಕೌಶಲ್ಯ ತರಬೇತಿ ಶಿಬಿರ 


ಮೂಡುಬಿದಿರೆ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆ ಫ್ ಬರೋಡ ಮೂಡುಬಿದಿರೆ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶ್ರೀ ತುಳಸಿ ಸಂಜೀವಿನಿ ಒಕ್ಕೂಟ ಶಿರ್ತಾಡಿ  ಹಾಗೂ ಗ್ರಾಮ ಪಂಚಾಯತ್ ಶಿರ್ತಾಡಿ ಇವುಗಳ ಜಂಟಿ ಆಶ್ರಯದಲ್ಲಿ 5 ದಿನಗಳ  ಸೀರೆಗೆ ಗೊಂಡೆ ಹಾಕುವ ಕೌಶಲ್ಯ ತರಬೇತಿಯು    ಸಂಜೀವಿನಿ ಕಟ್ಟಡ, ಶಿರ್ತಾಡಿಯಲ್ಲಿ ಸೋಮವಾರ ಆರಂಭಗೊಂಡಿತು. 

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಯಮಹಿಳೆಯರು  ತರಬೇತಿಯಿಂದ ಕೌಶಲ್ಯ   ಕಲಿತು  ಸ್ವಾವಲಂಬಿ ಜೀವನ ಸಾಗಿಸಲು ಪ್ರಯತ್ನ ಪಡಬೇಕು. ಬ್ಯಾಂಕ್ ಗಳು ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ನೀಡುತ್ತದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಜಯ ಪ್ರತಿಷ್ಠಾನದ ಗವರ್ನಿಂಗ್ ಕೌನ್ಸಿಲ್ ಸದಸ್ಯ  ಸಂಪತ್ ಸಾಮ್ರಾಜ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸ್ವ ಉದ್ಯೋಗ ತರಬೇತಿ ನೀಡಲು ವಿಜಯ ಪ್ರತಿಷ್ಠಾನ ಸದಾ ಸಿದ್ದವಿದೆ ಎಂದರು. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ತಾಪಕರಾದ ಜೀವನ್ ಕೊಲ್ಯ ಮಹಿಳೆಯರು ಸ್ವ ಉದ್ಯೋಗ ತರಬೇತಿಯ ಪ್ರಯೋಜನ ಪಡೆದು ಸಣ್ಣ ಸಣ್ಣ ಉದ್ದಿಮೆ ಪ್ರಾರಂಭ ಮಾಡಿ ಉಳಿತಾಯ ಮಾಡಿ ಯಶಸ್ಸು ಗಳಿಸಲು ಸಲಹೆ ನೀಡಿದರು. 

 ಶ್ರೀ ತುಳಸಿ ಒಕ್ಕೂಟದ ಅಧ್ಯಕ್ಷೆ  ಸವಿತ,  ಎನ್ ಆರ್ ಎಲ್ ಎಂ ತಾಲೂಕು ವ್ಯವಸ್ಥಾಪಕ ನಿಖಿಲ್,  ತರಬೇತುದಾರೆ ಶುಭ ಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

 ಸುಧಾ ಸ್ವಾಗತಿಸಿದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಶುಭಮಣಿ  ಧನ್ಯವಾದಗೈದರು. 30 ಜನ ಮಹಿಳೆಯರು  5 ದಿನದ ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Post a Comment

0 Comments