“ಹೆಚ್ ಆರ್ ಮಾಸ್ಟರ್ ಮೈಂಡ್ ” ಆರು ದಿನಗಳ ಕಾರ್ಯಾಗಾರ
ಸಮಾಜ ಕಾರ್ಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬೆಂಗಳೂರಿನ "HR Spectrum" ಸಹಯೋಗದಲ್ಲಿ “HR MASTERMIND” ಎಂಬ ಆರು ದಿನಗಳ ಕಾರ್ಯಾಗಾರವು ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ನಡೆಯಿತು.
ಎಸ್‌ಡಿಎಂ ಕಾಲೇಜಿನ ಉಜಿರೆಯ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಮಾನವ ಸಂಪನ್ಮೂಲ (HR) ವಿದ್ಯಾರ್ಥಿಗಳಿಗೆ ವ್ಯಾಪಾರ ಮತ್ತು ನಿಗಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದರ ಮೂಲಕ ನಿರ್ವಹಣೆಯ ಬದಲಾಯಿಸುತ್ತಿರುವ ನಿರೀಕ್ಷೆಗಳಿಗೆ ತಕ್ಕಂತೆ ತಯಾರಾಗಬೇಕೆಂದು ಅವರು ಸಲಹೆ ನೀಡಿ ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
HR Spectrum ಸಂಸ್ಥಾಪಕರು ಹಾಗೂ ವಿಭಾಗದ ಹಳೆ ವಿದ್ಯಾರ್ಥಿ ಮನ್ಮಥ ಎಚ್. ವಿ., ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹೆಚ್. ಆರ್. ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ. ಆದರೆ ವಿದ್ಯಾರ್ಥಿಗಳು ಪ್ರತಿಸಾರಿ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ತಮ್ಮ ಮಾತೃ ಸಂಸ್ಥೆಯಲ್ಲಿ ತರಬೇತಿ ನೀಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು, ತಮ್ಮ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಮಾಡುವ ಭರವಸೆ ನೀಡಿದರು.
ಎಸ್‌ಡಿಎಂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಸೌಮ್ಯ ಬಿ.ಪಿ., ಮತ್ತು ವಿಭಾಗ ಮುಖ್ಯಸ್ಥ ಡಾ. ರವಿಶಂಕರ್ ಕೆ.ಆರ್. ಹಾಜರಿದ್ದರು.
ಕಾರ್ಯಾಗಾರವನ್ನು ಡಾ. ಸುವೀರ್ ಜೈನ್ ಮತ್ತು ಡಾ. ಅತುಲ್ ಎಸ್. ಸೇಮಿತ ಆಯೋಜಿಸಿದರು.
ಕ್ಷಿತೀಕ್ಷಾ ಸ್ವಾಗತಿಸಿದರು. ಡಯಾನ ಶೆಟ್ಟಿ ಕಾಯ೯ಕ್ರಮ ನಿರೂಪಿಸಿದರು ಯಶಸ್ವಿನಿ ವಂದಿಸಿದರು.
0 Comments