ಅ.5ರಂದು ಮೂಡುಬಿದಿರೆಯಲ್ಲಿ ಸ್ನೇಹಕೂಟ ಕಂಬಳ

ಜಾಹೀರಾತು/Advertisment
ಜಾಹೀರಾತು/Advertisment

 ಅ.5ರಂದು ಮೂಡುಬಿದಿರೆಯಲ್ಲಿ ಸ್ನೇಹಕೂಟ ಕಂಬಳ

ಮೂಡುಬಿದಿರೆ: ಮಿಜಾರು ಹರಿಮೀಣಾಕ್ಷಿದೋಟ ಸುರೇಶ್ ಶೆಟ್ಟಿ ಅವರ ಸಾರಥ್ಯ, ತುಳುನಾಡ ಸೇನೆ ವತಿಯಿಂದ ಮೂಡುಬಿದಿರೆ ಕಡಲಕೆರೆ ನಿಸರ್ಗಧಾಮ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ಅ. 5ರಂದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸಂಬಾಜಿ ಮಹಾರಾಜ- ಸ್ನೇಹಕೂಟ ಕಂಬಳ ನಡೆಯಲಿದೆ.

ಶಾಸಕ ಉಮಾನಾಥ ಎ. ಕೋಟ್ಯಾನ್ ಸಹಕಾರದೊಂದಿಗೆ 

ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ಹಾಗೂ ನೇಗಿಲು ಸಬ್ ಜೂನಿಯರ್ ವಿಭಾಗಗಳಲ್ಲಿ ಕಂಬಳ ನಡೆಯಲಿದೆ. ಪ್ರಥಮ -5 ಗ್ರಾಂ ಚಿನ್ನದ ಪದಕ, ದ್ವಿತೀಯ - 3 ಗ್ರಾಂ ಚಿನ್ನದ ಪದಕ, ತೃತೀಯ ನಗದು ಮತ್ತು ಶಾಶ್ವತ ಫಲಕ, ಚತುರ್ಥ ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Post a Comment

0 Comments