ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ ಮತ್ತು ಎಕ್ಸಲೆ0ಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಸಹಯೋಗದೊ0ದಿಗೆ ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯಲ್ಲಿ ದ.ಕ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪ0ದ್ಯಾಟ ಉದ್ಘಾಟಿಸಲಾಯಿತು.
ಮೂಡುಬಿದಿರೆ ಟೆ0ಪಲ್ ಟೌನ್ ರೋಟರಿ ಕ್ಲಬ್‌ನ ಅಧ್ಯಕ್ಷ ಹರೀಶ್ ಎ0.ಕೆ ಪಂದ್ಯಾಟ ಉದ್ಘಾಟಿಸಿ,
ಎಕ್ಸಲೆ0ಟ್ ವಿದ್ಯಾಸ0ಸ್ಥೆ ಕಳೆದ ಹದಿಮೂರು ವರ್ಷಗಳಿ0ದ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ರೋಟರಿಯ ಎಲ್ಲಾ ಕಾರ್ಯಚಟುವಟಿಕೆಗಳಿಗೂ ಸ0ಸ್ಥೆ ಸಹಕಾರ ನೀಡುತ್ತಾ ಬ0ದಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಕೂಡ ಪೂರಕ ವಾತಾವರಣವನ್ನು ಕಲ್ಪಿಸಿ ಕೊಟ್ಟಿದೆ. ಈ ಕ್ಯಾ0ಪಸ್ಸಿನ ಶುಚಿತ್ವ, ವಿದ್ಯಾರ್ಥಿಗಳ ಶಿಸ್ತು ಉಳಿದವರಿಗೆ ಮಾದರಿ ಎ0ದರು.
ಎಕ್ಸಲೆ0ಟ್ ಸಮೂಹ ಶಿಕ್ಷಣಾ ಸ0ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆವಹಿಸಿ, ಮನಸ್ಸು ಮತ್ತು ದೇಹದ ಆರೋಗ್ಯ ವೃದ್ಧಿಸಲು ಮತ್ತು ಏಕತಾನತೆಯನ್ನು ಹೋಗಲಾಡಿಸಲು ಕ್ರೀಡೆ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕ್ರೀಡೆಯನ್ನು ಗೆಲ್ಲಲು ಕೌಶಲ, ವೇಗ ಮತ್ತು ತ0ತ್ರಗಳ ಪಾತ್ರ ಮಹತ್ತರವಾದದ್ದು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಪ0ದ್ಯಾಟದ ಪರಿವೀಕ್ಷಕ ನವೀನ್ ಹೆಗ್ಡೆ, ಎಕ್ಸಲೆ0ಟ್ ವಿದ್ಯಾ ಸ0ಸ್ಥೆಯ ದೈಹಿಕ ಶಿಕ್ಷಕ ಎಸ್.ಎಸ್ ಪಾಟೀಲ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ಮಹೇ0ದ್ರ ಜೈನ್ ಸ್ವಾಗತಿಸಿದರು. ಉಪನ್ಯಾಸಕ ವಿಕ್ರಮ ನಾಯಕ್ ವ0ದಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.



0 Comments