ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಪುಣ್ಯಕ್ಷೇತ್ರ ಮೂಡುಬಿದಿರೆಯ ಸಂರಕ್ಷಣಾ ಸಮಿತಿ ವತಿಯಿಂದ ಕನ್ನಡ ಭವನದಲ್ಲಿ ಸೆ. 20ರಂದು ನಡೆಯಲಿರುವ ಬೃಹತ್ ಜನಾಗ್ರಹ ಸಭೆಗೆ ಮುಂಚಿತವಾಗಿ ಸೋಮವಾರ ಇರುವೈಲು ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಪೂರ್ವಭಾವಿ ಸಭೆಯು ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷೆ ಸುಜಾತ ಜೆ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸದಸ್ಯ ಪ್ರವೀಣ್ ಪೂಜಾರಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪೂವಪ್ಪ ಸಾಲ್ಯಾನ್, ದೀಪಾ ಬಟಾರ, ಒಕ್ಕೂಟದ ಅಧ್ಯಕ್ಷ ಸೀನ ನಾಯ್ಕ್, ಕೋಶಾಧಿಕಾರಿ ಪ್ರಮೀಳಾ ದೇವರಗುಡ್ಡೆ, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಕೃಷ್ಣಪ್ಪ, ಲೇಖ ಪರಿಶೋಧಕ ನಾಗೇಶ್, ದಿನೇಶ್ ಪಂಜ, ಕಿಶೋರ್ ದೇವರಗುಡ್ಡೆ, ಅಣ್ಣಿ ಪೂಜಾರಿ ಉಪಸ್ಥಿತರಿದ್ದರು.

 



 
 
 
0 Comments