ಮೂಡುಬಿದಿರೆಯಲ್ಲಿ ಆಟೋ-ಬೈಕ್ ಢಿಕ್ಕಿ : ವೃದ್ಧ ಗಂಭೀರ, ಮೂವರಿಗೆ ಗಾಯ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಆಟೋ-ಬೈಕ್ ಢಿಕ್ಕಿ : ವೃದ್ಧ ಗಂಭೀರ, ಮೂವರಿಗೆ ಗಾಯ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ವಿಶಾಲ್ ನಗರದ ಪೆಟ್ರೋಲ್ ಬಂಕ್ ಬಳಿ ಆಟೋ ಮತ್ತು ಬೈಕ್ ಮತ್ತು ಢಿಕ್ಕಿಯಾದ ಪರಿಣಾಮವಾಗಿ ವೃದ್ಧರೋವ೯ರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಯನ್ನು ಬಿರಾವಿನ ಗೋಪಾಲ್ ಎಂದು ಗುರುತಿಸಲಾಗಿದೆ.

  ಆಟೋ ಚಾಲಕ ಮತ್ತು ಬೈಕ್ ನಲ್ಲಿದ್ದ ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  ಮಹಾವೀರ ಕಾಲೇಜು ಬಳಿಯಿಂದ ಮೂಡುಬಿದಿರೆಗೆ ಬರುತ್ತಿದ್ದ ಆಟೋಗೆ ವಿಶಾಲ್ ನಗರ ಪೆಟ್ರೋಲ್ ಬಂಕ್ ಬಳಿ ವಿದ್ಯಾಥಿ೯ಗಳ ಬೈಕ್ ಢಿಕ್ಕಿ ಹೊಡೆದು ಘಟನೆ ನಡೆದಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment

0 Comments