ಮೂಡುಬಿದಿರೆ : ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು
ಮೂಡುಬಿದಿರೆ: ಆ. 16 ರಂದು ಬೆಳುವಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ, ಸಂದೀಪ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಾವನ್ನಪ್ಪಿದ್ದಾರೆ.
ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ನಿವಾಸಿ ಸಂದೀಪ್(25) ಮೃತಪಟ್ಟ ಯುವಕ.
ಖಾಸಗಿ ಕಂಪೆನಿಯೊಂದರಲ್ಲಿ ನೌಕರಿಯಲ್ಲಿದ್ದ ಸಂದೀಪ್ ಹಾಗೂ ಅವರ ಮೂವರು ಸ್ನೇಹಿತರು ಆ.16ರಂದು ಸಾಯಂಕಾಲ ಕಾರಿನಲ್ಲಿ ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬೆಳುವಾಯಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ವೇಣೂರು ಪೆರ್ಮುಡೆ ಸುಮಿತ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರೊಂದಿಗೆ ಇದ್ದ ಸಂದೀಪ್ ಸಹಿತ ಇತರರು ಗಾಯಗೊಂಡಿದ್ದರು. ಸೊಂಟದ ಭಾಗದಲ್ಲಿ ಬಲವಾಗಿ ಪೆಟ್ಟು ಬಿದ್ದಿದ್ದ ಸಂದೀಪ್ ಅವರು ಭಾನುವಾರ ಮಧ್ಯಾಹ್ನ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
0 Comments