ಶಿತಾ೯ಡಿ ಜನರಲ್ ಸ್ಟೋರ್ ನಲ್ಲಿ ದನದ ಮಾಂಸ ಮಾರಾಟ : ವ್ಯಕ್ತಿ, 13 ಕೆ. ಜಿ. ಮಾಂಸ ಪೊಲೀಸರ ವಶಕ್ಕೆ
ಮೂಡುಬಿದಿರೆ : ಶಿತಾ೯ಡಿಯ ಜನರಲ್ ಸ್ಟೋರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮತ್ತು ಮಾಂಸವನ್ನು ಮೂಡುಬಿದಿರೆ ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿತಾ೯ಡಿಯ ಐಫಾ ಜನರಲ್ ಸ್ಟೋರ್ ನಲ್ಲಿ ದನದ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪಿಎಸ್ ಐ ಪ್ರತಿಭಾ ಅವರು ದಾಳಿ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದ ಇಕ್ಬಾಲ್ ಮತ್ತು 13 ಕೆ. ಜಿಯಷ್ಟು ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ. ಜಿ. ಅವರು ಮುಂದಿನ ತನಿಖೆಯನ್ನು ಕೈಗೊಳ್ಳಲಿದ್ದಾರೆ.
0 Comments