ತೆಂಕಮಿಜಾರಿನಲ್ಲಿ ಅಪಘಾತ ವಿಮಾ ಪಾಲಿಸಿ ನೋಂದಣಿ ಶಿಬಿರ
ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ.ಜಾತಿ ಮತ್ತು ಪಂಗಡ ದ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಪಂಚಾಯತ್ ನ ಶೇ 25 ನಿಧಿಯಿಂದ ಅಪಘಾತ ವಿಮಾ ಪಾಲಿಸಿಯನ್ನು ಮಾಡಿಕೊಡುವ ಬಗ್ಗೆ ನೋಂದಾವಣಿ ಶಿಬಿರವು ಪಂಚಾಯತ್ ಸಭಾಭವನದಲ್ಲಿ ಸೋಮವಾರ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಇವರು ನೋಂದಾವಣೆ ಶಿಬಿರಕ್ಕೆ ಚಾಲನೆ ನೀಡಿದರು. ಸದಸ್ಯ ಜಯಲಕ್ಷ್ಮಿ, ಅಂಚೆ ಇಲಾಖೆ ಸಿಬ್ಬಂದಿ ಶಿವಪ್ರಸಾದ್,ಗ್ರಾಮ ಒನ್ ನ ಸುದರ್ಶನ್, ಫಲಾನುಭವಿಗಳು ಹಾಗೂ ಸಿಬ್ಬಂದಿವರ್ಗದವರು ಈ ಸಂದಭ೯ದಲ್ಲಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಸ್ವಾಗತಿಸಿ ಮಾಹಿತಿ ನೀಡಿದರು.
ದ್ವಿತೀಯ ದರ್ಜೆ ಸಹಾಯಕ ರಮೇಶ್ ಅವರು ವಂದಿಸಿದರು.
0 Comments