ಹಾಳಾಗಿ ನಿಂತ ಮಣ್ಣು ತುಂಬಿದ ಲಾರಿ : ಸೈಡ್ ಗೆ ಜಾರಿದ ಕಲ್ಲಿನ ಲಾರಿ *3ಗಂಟೆಗಳ ಕಾಲ ಟ್ರಾಫಿಕ್ ಜಾಮ್

ಜಾಹೀರಾತು/Advertisment
ಜಾಹೀರಾತು/Advertisment

 ಹಾಳಾಗಿ ನಿಂತ ಮಣ್ಣು ತುಂಬಿದ ಲಾರಿ : ಸೈಡ್ ಗೆ ಜಾರಿದ ಕಲ್ಲಿನ ಲಾರಿ

*3ಗಂಟೆಗಳ ಕಾಲ ಟ್ರಾಫಿಕ್ ಜಾಮ್

ಮೂಡುಬಿದಿರೆ : ಮಣ್ಣು ತುಂಬಿಸಿಕೊಡು ರಸ್ತೆಯಲ್ಲಿ ಹಾಳಾಗಿ ನಿಂತಿದ್ದ ಆಂಧ್ರ ಪ್ರದೇಶ ಮೂಲದ ಲಾರಿಯೊಂದಕ್ಕೆ  ಸೈಡ್ ನೀಡಲು ಹೋದ ಕಲ್ಲಿನ ಲಾರಿಯೊಂದು ರಸ್ತೆ ಬದಿಗೆ ಜಾರಿದ ಪರಿಣಾಮವಾಗಿ ಮೂರೂವರೆ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆದ ಘಟನೆ ತಾಲೂಕಿನ ಪುತ್ತಿಗೆ ಪಟ್ಲದ ಬಳಿ ಇಂದು ಬೆಳಿಗ್ಗೆ ನಡೆದಿದೆ.

 ಬೆಳಗ್ಗಿನ ವೇಳೆ ಈ ಘಟನೆ ನಡೆದಿದ್ದರಿಂದ ಇತರ ವಾಹನ ಸವಾರರು ತೊಂದರೆಯನ್ನು ಅನುಭವಿಸಿದ್ದು, ಮಣ್ಣಿನ ತುಂಬಿಸಿಕೊಂಡು ಹೋಗುತ್ತಿರುವ ಲಾರಿಗಳ ಬಗ್ಗೆ ಸಾವ೯ಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.


ಮೂಡುಬಿದಿರೆ- ಪುತ್ತಿಗೆ- ಬೆಳುವಾಯಿ ಈ ರಸ್ತೆಯಲ್ಲಿ ಕಳೆದ ಕೆಲವು ಸಮಯಗಳಿಂದ ಮಣ್ಣು ತುಂಬಿಸಿಕೊಂಡು ಆಂಧ್ರ ಮೂಲದ ಲಾರಿಗಳು ಎಗ್ಗಲ್ಲದೆ ಅತೀ ವೇಗದಿಂದ ಓಡಾಡುತ್ತಿದ್ದು ಇತರ ವಾಹನಗಳಿಗೆ ಸೈಡ್ ನೀಡದೆ ರಾಜಾರೋಷದಿಂದ ಮೆರೆಯುತ್ತಿವೆ


 ಈ ಬಗ್ಗೆ ಸಾವ೯ಜನಿಕರು ಗ್ರಾಮಸಭೆಗಳಲ್ಲಿ  ಆಕ್ರೋಶವನ್ನು ಕೂಡಾ ವ್ಯಕ್ತ ಪಡಿಸಿದ್ದರು. 

 ಮಣ್ಣು ತುಂಬಿಕೊಂಡು ಹೋಗುವ ಲಾರಿಗಳಿಂದಾಗಿ ಪಲ್ಲದ ಮೇಲು ಎಸ್ ಸಿ, ಎಸ್. ಸಿ ಕಾಲನಿಗೆ ನೀರಿನ ಸಂಪಕ೯ ಕಲ್ಪಿಸುವ ಪೈಪ್ ಗಳು ಒಡೆದು ಹೋಗುತ್ತಿದ್ದು ಇದರಿಂದಾಗಿ ಕಾಲನಿಯವರು ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ.

  ನಮ್ಮೂರಿನಿಂದ ಮಣ್ಣು ತುಂಬಿಸಿಕೊಂಡು ಹೋಗುತ್ತಿರುವ ಆಂಧ್ರ ಮೂಲದ ಈ ಲಾರಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕಾಗಿದೆ.

Post a Comment

0 Comments