ಮೂಡುಬಿದಿರೆಯಲ್ಲಿ ಕನ್ನಡ ಚಲನಚಿತ್ರ "ಮಂಗಳಪುರಂ"ಗೆ ಮುಹೂರ್ತ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಕನ್ನಡ ಚಲನಚಿತ್ರ "ಮಂಗಳಪುರಂ"ಗೆ ಮುಹೂರ್ತ

ಮೂಡುಬಿದಿರೆ: ಮೂಡುಬಿದಿರೆಯ ಪ್ರಸನ್ನ ತಂತ್ರಿ, ರಾಮ್ ಪ್ರಸಾದ್ ನಿರ್ಮಾಣ, ರಂಜಿತ್ ರಾಜ್ ಸುವರ್ಣ ನಿರ್ಮಾಣದ `ಮಂಗಳಾಪುರಂ' ಕನ್ನಡ ಚಲನಚಿತ್ರ ಕ್ಕೆ ಅಲಂಗಾರು ಬಡಗ ಶ್ರೀಮಹಾಲಿಂಗೇಶ್ವರ ದೇವಳದಲ್ಲಿ ಶುಕ್ರವಾರ ಮುಹೂರ್ತ ನೆರವೇರಿತು. 


ಮೂಡುಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ ಆಳ್ವ ಚಿತ್ರೀಕರಣಕ್ಕೆ ಚಾಲನೆ ನೀಡಿದರು. 


ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಾದ ರಿಷಿ, ಅಭಿಮನ್ಯು ಗೌತಮಿ ಜಾದವ್ ಮುಖ್ಯ ಭೂಮಿಕೆಯಲ್ಲಿದ್ದು ಪ್ರಕಾಶ್ ಬೆಳವಾಡಿ, ವೈದ್ಯನಾಥ ಬಿರಾದರ್, ದೀಪಕ್ ರೈ, ಅವಿನಾಶ್, ಪುಷ್ಪರಾಜ್, ದೇವದಾಸ್ ಕಾಪಿಕಾಡ್, ರಾಮದಾಸ್ ಕೂಡ ಅಭಿನಯಿಸಲಿದ್ದಾರೆ.


ಕಾಯ೯ಕ್ರಮದಲ್ಲಿ ಅಲಂಗಾರು ಈಶ್ವರ ಭಟ್, ಅರಮನೆ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ಬೊಕ್ಕಸ ಚಂದ್ರಶೇಖರ್ ರಾವ್, ನಿರ್ಮಾಪಕರುಗಳಾದ ಪ್ರಸನ್ನ ತಂತ್ರಿ, ರಂಜಿತ್ ರಾಜ್ ಸುವರ್ಣ, ದೇವಾನಂದ ಭಟ್ ಮತ್ತಿತರರಿದ್ದರು. 


*ವಾರಾಹಿ ಕ್ರಿಯೇಶನ್ಸ್ ರವರು ಮಂಗಳಾಪುರಂ ಎನ್ನುವ ಕನ್ನಡ ಚಿತ್ರದ ಚಿತ್ರೀಕರಣದ ಆರಂಭವನ್ನು  ಅಲಂಗಾರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಸಿದ್ದಾರೆ.

.

ಅಭಿಷೇಕ್ ರ ಛಾಯಾಗ್ರಹಣ, ಅನೂಪ್ ಸಂಗೀತ, ಜನಾರ್ಧನ್ ಕಲಾ ನಿರ್ದೇಶನ, ಸತೀಶ್ ಚಂದ್ರಯ್ಯ ರವರ ಸಂಕಲನ, ಶಿಲ್ಪ ಹೆಗಡೆ ವಸ್ತç ವಿನ್ಯಾಸ, ಅಗ್ನಿ ರಾಜ್ ನಿರ್ಮಾಣ ಮತ್ತು ನಿರ್ವಹಣೆ, ಸಹ ನಿರ್ದೇಶನ ಮಧು ಕೆ.ಡಿ, ಮಣಿ ಭೂಪತಿ, ಸಹಾಯಕ ನಿರ್ದೇಶಕ ಶಿವಪ್ರಸಾದ್, ಗಿರೀಶ್, ಲೋಕೇಶ್ ಸಿನಿಮಾಕ್ಕಿದೆ.

Post a Comment

0 Comments