ಸಾಯೀ ಮಾನಾ೯ಡ್ ನಿಂದ ಚಿಕಿತ್ಸೆಗೆ ನೆರವು
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ
74ನೇ ಯೋಜನೆ
ಆಗಸ್ಟ್ ತಿಂಗಳ 2ನೇ ಯೋಜನೆಯನ್ನು ಪಡುಮಾರ್ನಾಡ್ ಗ್ರಾಮದ ಬಂಗೊಟ್ಟು ಬಳಿಯ ಕೆಂಪುಲು ನಿವಾಸಿ ಅಶೋಕ್ ಪೂಜಾರಿ ಎಂಬವರ ಚಿಕಿತ್ಸೆಗೆ ರೂ 10,000 ನೆರವು ನೀಡಿದೆ.
ಅಶೋಕ್ ಪೂಜಾರಿ ಅವರು ಸುಮಾರು 10ವರ್ಷದಿಂದ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಕಳೆದ 5ವರ್ಷ ದಿಂದ ಕರುಳಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡಲು ಆಗದೇ ಅಸಹಾಯಕ ಸ್ಥಿತಿಯಲ್ಲಿ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಅವರ ಹೆಂಡತಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು, ಗಂಡನ ಚಿಕಿತ್ಸೆಗೆ ಈವರೆಗೆ ಸುಮಾರು 2ಲಕ್ಷ ಖರ್ಚು ಮಾಡಿರುತ್ತಾರೆ. ಇದೀಗ ಆಯುರ್ವೇದಿಕ್ ಮದ್ದು ಆರಂಭಿಸಿದ್ದಾರೆ. ಇವರಿಗೆ ಮಕ್ಕಳು ಇಲ್ಲದೇ ಇರುವುದರಿಂದ ಇವರ ಕಷ್ಟಕ್ಕೆ ಸ್ಪಂದಿಸಿದ ಸಾಯೀ ಮಾನಾ೯ ಡ್ ಸೇವಾ ಸಂಘವು ಮಾನವೀಯತೆಯ ನೆಲೆಯಲ್ಲಿ ರೂ 10000ದ ಚೆಕ್ಕನ್ನು ಸೋಮವಾರ ಹಸ್ತಾಂತರಿಸಿದೆ.
0 Comments