ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವ : ಹಸಿರು ಹೊರೆಕಾಣಿಕೆ ಮೆರವಣಿಗೆ


ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಸಾವ೯ಜನಿಕ ಶ್ರೀ ಗಣೇಶೋತ್ಸವ : ಹಸಿರು ಹೊರೆಕಾಣಿಕೆ ಮೆರವಣಿಗೆ

ಮೂಡುಬಿದಿರೆ : ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಆ.27ರಿಂದ 31ರವರೆಗೆ  ಸಮಾಜ ಮಂದಿರದಲ್ಲಿ ನಡೆಯಲಿರುವ 62ನೇ ವರ್ಷದ ಗಣೇಶೋತ್ಸವಕ್ಕೆ ಪೂರಕವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು. 

 ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಎಂಸಿಎಸ್ ಸೊಸೈಟಿ ಎದುರು   ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. 

ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ., ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಪ್ರಭು, ಟ್ರಸ್ಟ್ ನ  ಪ್ರಧಾನ ಕಾಯ೯ದಶಿ೯ ಸುದಶ೯ನ್ ಎಂ,ಉಪಾಧ್ಯಕ್ಷರಾದ ಕೊರಗಪ್ಪ, ರಾಜಾರಾಮ್ ನಾಗರಕಟ್ಟೆ , ಕಾರ್ಯದರ್ಶಿ ಗಂಗಾಧರ ಎಂ,  ಮಾಜಿ ಅಧ್ಯಕ್ಷ ಕೆ. ಶ್ರೀಪತಿ ಭಟ್  ಬ್ಯಾಂಕಿನ ನಿದೇ೯ಶಕರುಗಳು ಈ ಸಂದಭ೯ದಲ್ಲಿದ್ದರು.


ಈ ಸಂದಭ೯ದಲ್ಲಿ ಬೆಳ್ಳಿಯ ರಥ ಹಾಗೂ ದೇವರ ಪ್ರಭಾವಳಿಯನ್ನೂ ಮೆರವಣಿಗೆಯಲ್ಲಿ ತರಲಾಯಿತು. 

ನಂತರ ಸಮಾಜ ಮಂದಿರದಲ್ಲಿ ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ  ಅಚ೯ಕ ಸುಭ್ರಹ್ಮಣ್ಯ ಭಟ್ ಅವರಿಂದ ಉಗ್ರಾಣ ಪೂಜೆ ನಡೆಯಿತು. 

ಎಂಸಿಎಸ್ ಬ್ಯಾಂಕಿನ ವಿಶೇಷ ಕತ೯ವ್ಯಾಧಿಕಾರಿ  ಚಂದ್ರಶೇಖರ ಎಂ. ಅವರು ಹೊರೆಕಾಣಿಕೆ ಮೆರವಣಿಗೆಯ ನೇತೃತ್ವ ವಹಿಸಿದ್ದರು.

Post a Comment

0 Comments