ಬಸ್ಸಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವತಿ೯ಸಿದ ಅಜ್ಜ : ಪೊಲೀಸರ ವಶಕ್ಕೆ

 ಬಸ್ಸಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವತಿ೯ಸಿದ ಅಜ್ಜ : ಪೊಲೀಸರ ವಶಕ್ಕೆ

ಮೂಡುಬಿದಿರೆ:  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದಭ೯ ಅಜ್ಜನೋವ೯ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ವೀಡಿಯೋ ಕ್ಲಿಪಿಂಗ್ಸ್  ವೈರಲ್ ಆಗುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಆರೋಪಿಯನ್ನು  ವಶಕ್ಕೆ ಪಡೆದುಕೊಂಡಿದ್ದಾರೆ. 


 ಬೆಳುವಾಯಿ ಗ್ರಾಮದ ಕರಿಯನಂಗಡಿ ನಿವಾಸಿ 60 ವರ್ಷದ ರೆಹ್ಮಾನ್ ಆರೋಪಿ. ಈತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದಭ೯  ಆತನ ಬದಿಯಲ್ಲಿ ಯುವತಿಯೋರ್ವಳು ನಿಂತಿದ್ದಳು. ಆರೋಪಿಯು ತನ್ನ ಕೈಗಳಿಂದ ಆಕೆಯ ತೊಡೆ, ಕಾಲುಗಳನ್ನು ಮುಟ್ಟುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

  ವೀಡಿಯೋದಲ್ಲಿ ಯುವತಿಯ ಮುಖ ಚಹರೆ ಸರಿಯಾಗಿ ಕಾಣದೆ ಇರುವುದರಿಂದ ತೊಂದರೆಕ್ಕೊಳಗಾಗಿರುವವರು ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ಮೂಡುಬಿದಿರೆ ಠಾಣೆಯ ಪ್ರಕಟನೆ ತಿಳಿಸಿದೆ.

Post a Comment

0 Comments

Advertisement