ಮೂಡುಬಿದಿರೆ : ಆಂಧ್ರಪ್ರದೇಶದಿಂದ 123 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ವಾಹನ ಸಹಿತ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್‌ನ ಮಠದಕೆರೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಸರಗೋಡು ತಾಲೂಕಿನ ಆಡೂರು ಮೊಗರುಹೌಸ್‌ನ ಮಸೂದ್ ಎಂ.ಕೆ.(45), ದೇಲಂಪಾಡಿ ಪರಪ್ಪ ಚೆಂದಮೂಲ ನಿವಾಸಿ ಮೊಹಮ್ಮದ್ ಆಶಿಕ್(24), ದೇಲಂಪಾಡಿ ಪರಪ್ಪ ನಿವಾಸಿ ಸುಬೇರ್(30) ಬಂಧಿತರು.
ಬಂಧಿತರಿಂದ 123 ಕೆ.ಜಿ. ಗಾಂಜಾ ಹಾಗೂ ಸಾಗಾಟ ಮಾಡಲು ಬಳಸಿದ್ದ ಎರಡು ಕಾರುಗಳು, 5 ಮೊಬೈಲ್ ಸೇರಿ ಒಟ್ಟು ಮೌಲ್ಯ 46.20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಪೊಲೀಸರು ಕಳೆದ ಒಂದು ತಿಂಗಳಿನಿಂದ ಇವರ ಬಗ್ಗೆ ನಿಗಾ ಇಟ್ಟಿದ್ದರು. ಇವರು ಆಂಧ್ರಪ್ರದೇಶದಿಂದ ಬೃಹತ್ ಪ್ರಮಾಣದಲ್ಲಿ ಗಾಂಜಾ ತಂದು 50-100 ಗ್ರಾಂ ಪ್ಯಾಕೆಟ್‌ಗಳನ್ನಾಗಿಸಿ ಕಾಸರಗೋಡು ಹಾಗೂ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
0 Comments