ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋಸ್ : ಸಮಿತ್ ರಾಜ್ ದರೆಗುಡ್ಡೆ ಮೇಲೆ ಕೇಸು ದಾಖಲು
ಮೂಡುಬಿದಿರೆ : ತನ್ನ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋಗಳನ್ನು ಇಟ್ಟುಕೊಂಡಿರುವುದಕ್ಕೆ ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಮೇಲೆ ಮೂಡುಬಿದಿರೆ ಪೊಲೀಸರು ಗುರುವಾರ ಕೇಸು ದಾಖಲಿಸಿಕೊಂಡಿದ್ದಾರೆ.
ಹಿನ್ನೆಲೆ: 2024ರಲ್ಲಿ ಮೈಟ್ ಕಾಲೇಜು ಬಳಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿರುವವರಿಗೆ ಬಸ್ ಮಾಲಕ ಸ್ಥಳದಲ್ಲಿಯೇ ಪರಿಹಾರ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದ ಹಿಂದೆ ಸಮಿತ್ ರಾಜ್ ನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದರು. ನಂತರ ಎರಡು ದಿನಗಳ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಈ ಸಂದಭ೯ ಪೊಲೀಸರು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.
ಇದೀಗ ಪೊಲೀಸರು ಮೊಬೈಲ್ ನ್ನು ಪರಿಶೀಲಿಸಿದಾಗ ಅದರಲ್ಲಿ ಅಶ್ಲೀಲ ವೀಡಿಯೋಗಳಿರುವುದು ಬೆಳಕಿಗೆ ಬಂದಿದ್ದು ಇದಕ್ಕಾಗಿ ಕೇಸು ದಾಖಲಿಸಿಕೊಂಡಿದ್ದಾರೆ.
0 Comments