ವಿಶ್ವದಾಖಲೆ ಬರೆದ ಮೂಡುಬಿದಿರೆಯ ಯಶವಂತ್ ಎಂ.ಜಿ.ಯವರಿಗೆ ಕೇಂದ್ರ ಸಚಿವರಿಂದ ಸನ್ಮಾನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 ವಿಶ್ವದಾಖಲೆ ಬರೆದ ಮೂಡುಬಿದಿರೆಯ ಯಶವಂತ್ ಎಂ.ಜಿ.ಯವರಿಗೆ ಕೇಂದ್ರ ಸಚಿವರಿಂದ ಸನ್ಮಾನ

ಗಾನ ಗಂಧರ್ವ ದೇಶದ ಖ್ಯಾತ ಗಾಯಕ ದಿ.ಎಸ್.ಪಿ. ಬಾಲಸುಬ್ರಮಣ್ಯಂ ರವರ 270ಕ್ಕೂ ಅಧಿಕ ಹಾಡುಗಳನ್ನು 24 ಗಂಟೆಗಳ ಕಾಲ ನಿರರ್ಗಳವಾಗಿ ಹಾಡುವ ಮೂಲಕ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ ಝೀ ಕನ್ನಡ ಸರಿಗಮಪ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ವಿದ್ವಾನ್ ಯಶವಂತ್ ಎಂಜಿ ಅವರನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಅಭಿನಂದಿಸಿದರು.



ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಜನ್ಮದಿನವಾದ ಜೂನ್ 04 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ವಿಶ್ವದಾಖಲೆ ಕಾರ್ಯಕ್ರಮ ನಡೆದಿದ್ದು "ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌" ಇದರ ಏಷಿಯಾ ಅಧಿಕಾರಿಗಳಿಂದ ಈ ದಾಖಲೆಯನ್ನು ಹಸ್ತಾಂತರಿಸಲಾಯಿತು.


ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಕಛೇರಿಯಲ್ಲಿ ಸನ್ಮಾನಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರಿಗೆ ಸಂದೇಶ ಕಳಿಸಿದ್ದು; ದಿನಾಂಕ 30.06.2025ನೇ ಸೋಮವಾರ ಜೋಶಿ ಅವರು ಹುಬ್ಬಳ್ಳಿಯ ತಮ್ಮ ಕಚೇರಿಗೆ ಬರಮಾಡಿಕೊಂಡು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ವೀಕ್ಷಿಸಿ ಅಭಿನಂದಿಸಿ ಶುಭಾಶಯಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಯಶವಂತ್ ಎಂಜಿ ಕುಟುಂಬಸ್ಥರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಟದ ಸದಸ್ಯರಾದ ಸುನಿಲ್ ಪಣಪಿಲ ಜೊತೆಗಿದ್ದರು.

Post a Comment

0 Comments

Advertisement