ಆಲಂಗಾರ್ ಲಯನ್ಸ್ ಕ್ಲಬ್ ಪದಗ್ರಹಣ

ಜಾಹೀರಾತು/Advertisment
ಜಾಹೀರಾತು/Advertisment

 ಆಲಂಗಾರ್ ಲಯನ್ಸ್ ಕ್ಲಬ್ ಪದಗ್ರಹಣ


ಮೂಡುಬಿದಿರೆ: ಲಯನ್ಸ್ ಕ್ಲಬ್ ಸದಸ್ಯತ್ವ ಹಾಗೂ ಹುದ್ದೆಗಳಿಗೆ ಸಮಾಜದಲ್ಲಿ ಉತ್ತಮವಾದ ಗೌರವವಿದೆ. ಕ್ಲಬ್ ಅನ್ನು ಉತ್ತಮವಾಗಿ ಸಂಘಟಿಸಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಲಯನ್ಸ್ ಕ್ಲಬ್‌ನ ಸದಸ್ಯತ್ವಕ್ಕೆ ಮೌಲ್ಯ ಬರುತ್ತದೆ. ಲಯನ್ಸ್ ಅಂತಾರಾಷ್ಟಿçÃಯ ಸಂಘಟನೆಯಾದರೂ ಸ್ಥಳೀಯವಾಗಿ ಜನರಿಗೆ ಸ್ಪಂದಿಸುತ್ತದೆ ಎಂದು 2022-23ನೇ ಸಾಲಿನ ರೋಟರಿ ಜಿಲ್ಲಾ ಜಿಎಂಟಿ ಸಂಯೋಜಕ ಪ್ರಶಾಂತ್ ಬಿ. ಶೆಟ್ಟಿ ಹೇಳಿದರು. 

ಒಂಟಿಕಟ್ಟೆಯಲ್ಲಿರುವ ಸೃಷ್ಟಿ ಸಭಾಭವನದಲ್ಲಿ ನಡೆದ ಅಲಂಗಾರ್ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿದರು. 


ನಿರ್ಗಮನ ಅಧ್ಯಕ್ಷೆ ಜೆಸ್ಸಿಂತಾ ಡಿಮೆಲ್ಲೊ ಅಧ್ಯಕ್ಷತೆವಹಿಸಿದರು.ನೂತನ ಅಧ್ಯಕ್ಷ ಅಮಿತ್ ಡಿಸಿಲ್ವ ಲೊಯೊಲ, ಕಾರ್ಯದರ್ಶಿ ರಿಚರ್ಡ್ ಡಿಸೋಜ, ಕೋಶಾಧಿಕಾರಿ ರೋಕಿ ಮಸ್ಕೇರೇನಸ್ ಸಹಿತ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು. 14 ಮಂದಿ ಹೊಸ ಸದಸ್ಯರುಗಳಿಗೆ ಪ್ರತಿಜ್ಞಾ ಸ್ವೀಕಾರ ಮಾಡಿದರು. ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಲಯನ್ಸ್ ಪ್ರಾಂತ್ಯ 10ರ ಪ್ರಾಂತ್ಯಧ್ಯಕ್ಷ ಜಗದೀಶ್‌ಚಂದ್ರ ಡಿ.ಕೆ, ವಲಯಾಧ್ಯಕ್ಷರಾದ ಜೊಸ್ಸಿ ಮೆನೇಜಸ್, ಮೆಲ್ವಿನ್ ಸಾಲ್ದಾನ, ನಿರ್ಗಮನ ಕಾರ್ಯದರ್ಶಿ ರಾಜ ಡಿಸೋಜ, ಕೋಶಾಧಿಕಾರಿ ಆಲ್ವಿನ್ ಡಿಕುನ್ಹಾ ಹಾಗೂ 8 ಕ್ಲಬ್‌ಗಳ ಅಧ್ಯಕ್ಷರು ಉಪಸ್ಥಿತರಿದ್ದರು. 

ಮನೋಹರ್ ಕುಟಿನ್ಹ ನಿರೂಪಿಸಿದರು.

Post a Comment

0 Comments