ಬ್ಲಡ್ ಕ್ಯಾನ್ಸರ್ ರೋಗಿಗೆ ಸಾಯೀ ಮಾನಾ೯ಡ್ ಸೇವಾ ಸಂಘದಿಂದ ಧನ ಸಹಾಯ ಹಸ್ತಾಂತರ
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ
65ನೇ ಸೇವಾ ಯೋಜನೆಯನ್ನು
ಪೆರ್ಲ ಬಜಕೂಡ್ಲು ನಿವಾಸಿ ಕಾವ್ಯಶ್ರೀ ರೈ ಎಂಬವರ ಅರೋಗ್ಯ ಸಮಸ್ಯೆಗೆ ವಿತರಿಸಲಾಯಿತು.
ಪೆರ್ಲ ಬಜಕೂಡ್ಲು ನಿವಾಸಿ ಬೇಬಿ ಅವರ ಪುತ್ರಿ ಕಾವ್ಯಶ್ರೀ ರೈ ಅವರ ವಿವಾಹವಾಗಿ ಕೇವಲ 2ವಾರ ಗಳು ಕಳೆಯುವಷ್ಟರಲ್ಲೆ ಬ್ಲಡ್ ಕ್ಯಾನ್ಸರ್ ಎಂಬ ಕಾಯಿಲೆ ಅವರ ಬದುಕನ್ನೇ ಕಸಿದುಕೊಂಡಿದೆ. ಪ್ರಥಮ ಹಂತ ದಲ್ಲಿ ರುವ ಈ ಕಾಯಿಲೆ ವಾಸಿಯಾಗಬೇಕಾದರೆ ಸುಮಾರು 25ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದು ಅವರಿಗೆ ದೊಡ್ಡ ಮೊತ್ತವನ್ನು ಹೊಂದಿಸಲು ಕಷ್ಟ ಆಗಿರುವುದರಿಂದ ಸಾಯೀ ಮಾನಾ೯ಡ್ ಸೇವಾ ಸಂಘವು ಜೂನ್ ತಿಂಗಳ 1ನೇ ಯೋಜನೆಯ ರೂ 10000 ಧನ ಸಹಾಯವನ್ನು ಜೂ. 23ರಂದು ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ.
0 Comments