ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಯೂತ್ ಯೋಗ ಫೆಸ್ಟಿವಲ್

ಜಾಹೀರಾತು/Advertisment
ಜಾಹೀರಾತು/Advertisment

 ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಯೂತ್ ಯೋಗ ಫೆಸ್ಟಿವಲ್


ಮೂಡುಬಿದಿರೆ: ನ್ಯಾಚುರೋಪಥಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬರುವ ಅಡೆತಡೆಗಳನ್ನು ಯೋಗತತ್ವಶಾಸ್ತ್ರ ಸಿದ್ಧಾಂತಗಳ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು. ?ನಮ್ಮ ಭವಿಷ್ಯವನ್ನು ನಮ್ಮ ವರ್ತಮಾನ ನಿರ್ಧರಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರ ಹಾಗೂ ನಿದ್ರೆ ನಮ್ಮ ಭವಿಷ್ಯದ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯದಲ್ಲಿ ಧನಾತ್ಮಕ ಶಕ್ತಿ ಹೆಚ್ಚಳವಾಗುತ್ತದೆ ಎಂದು ಉಜಿರೆ ಎಸ್‌ಡಿಎಂ ನ್ಯಾಚುರೋಪತಿ, ಯೋಗಿಕ್ ಸೈನ್ಸ್ ಕಾಲೇಜಿನ ಉಪಪ್ರಾಂಶುಪಾಲೆ ಡಾ. ಸುಜಾತ ದಿನೇಶ್ ಹೇಳಿದರು.


ಆಳ್ವಾಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ಪರಿಷತ್ತು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಜಂಟಿ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 16 ರಿಂದ 19ರವರೆಗೆ ನಡೆದ `ಯೂತ್ ಯೋಗ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿದರು. ನಾಗಮಂಡಲದಲ್ಲಿರುವ ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಸಂಶೋಧನಾ ಮಂಡಳಿ ಸಂಶೋಧನಾ ಅಧಿಕಾರಿ ಡಾ. ನಿತೀಶ್ ಎಂ.ಕೆ ಮುಖ್ಯ ಅತಿಥಿಯಾಗಿದ್ದರು.

ಪ ತಂಜಲಿ ಮಹರ್ಷಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮೂರು ದಿನಗಳ ಕಾಲ ನಡೆದ ಯೂತ್ ಯೋಗ ಫೆಸ್ಟಿವಲ್‌ನಲ್ಲಿ ಯೋಗ ಒಲಿಂಪಿಯಾಡ್, ಯೋಗ ಸ್ಕಿಟ್, ಯೋಗ ಡ್ಯಾನ್ಸ್ ಫ್ಯೂಷನ್, ಯೋಗ ಡಿಬೇಟ್, ಯೋಗ ರೀಲ್ಸ್, ಯೋಗ ಗಿಬ್ಲಿ, ಯೋಗ ಪೋಸ್ಟರ್ ಸ್ಪರ್ಧೆಗಳು ನಡೆಯಲಿವೆ. ?ಎಸ್‌ಡಿಎಮ್ ಕಾಲೇಜ್ ಉಜಿರೆ, ಯೆನೆಪೋಯ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಶಾರದಾ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮುನಿಯಾಲ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಹಾಗೂ ಆಳ್ವಾಸ್ ಶಾಲೆ ಹಾಗೂ ಪದವಿ ಕಾಲೇಜುಗಳ ಸುಮಾರು 200 ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡರು. 

ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ.ವಿದ್ಯಾರಾಣಿ ಉಪಸ್ಥಿತರಿದ್ದರು. 

ಸರೀನಾ ರೊಡ್ರಿಗಸ್ ನಿರೂಪಿಸಿದರು.

Post a Comment

0 Comments