2023-24ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಮೂಡುಬಿದಿರೆಯ ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ

ಜಾಹೀರಾತು/Advertisment
ಜಾಹೀರಾತು/Advertisment

2023-24ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಮೂಡುಬಿದಿರೆಯ ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ 

 ಕರ್ನಾಟಕ ರಾಜ್ಯ ಸರಕಾರ ಕೃಷಿ ಕ್ಷೇತ್ರದಲ್ಲಿನ ಸರ್ವಾಂಗೀಣ ಸಾಧನೆಗಾಗಿ ಕೊಡಮಾಡುವ 2023-24ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಮೂಡುಬಿದಿರೆಯ ಅಂಬೂರಿ ನಾಗರಾಜ ಶೆಟ್ಟಿ ಅವರಿಗೆ ಲಭಿಸಿದೆ.


ಕೃಷಿ ಕ್ಷೇತ್ರದಲ್ಲಿ ವಿನೂತನ ಹಾಗೂ ಹೊಸ ಮತ್ತು ಸೃಜನಾತ್ಮಕ ಅನ್ವೇಷಣೆಯ ಕಾರ್ಯಗಳೊಂದಿಗೆ ಸಾಧನೆ ಮೆರೆದ ರೈತರಿಗೆ ಈ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯೊಂದಿಗೆ 50ಸಾವಿರ ನಗದು ಬಹುಮಾನವನ್ನು ಕೂಡ ನೀಡಲಾಗುತ್ತಿದೆ.


ಅಂಬೂರಿ ನಾಗರಾಜ ಶೆಟ್ಟಿ ಅವರು ತನ್ನ ಕೃಷಿ ಕ್ಷೇತ್ರದಲ್ಲಿ ಬಹು ವಿಧದ ಬೆಳೆಗಳನ್ನು ಅನುಷ್ಠಾನಗೊಳಿಸಿ ಉತ್ಪತ್ತಿ ಪಡೆಯುತ್ತಿರುವುದಲ್ಲದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತನ್ನ ಕೃಷಿ ಕ್ಷೇತ್ರದಿಂದಾಗಿ ಗಮನ ಸೆಳೆಯುತ್ತಿದ್ದಾರೆ.

Post a Comment

0 Comments