ಗಾಳಿಗೆ ಉರುಳಿ ಬಿದ್ದ ಮರ : ರಸ್ತೆ ಜಖಂ
ಮೂಡುಬಿದಿರೆ : ಮಂಗಳವಾರ ಸಂಜೆ ವೇಳೆಗೆ ಬೀಸಿದ ಗಾಳಿಯ ರಭಸಕ್ಕೆ ಮಾವಿನ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮವಾಗಿ ರಸ್ತೆ ಜಖಂಗೊಂಡು ವಾಹನ ಸಂಚಾರಕ್ಕೆ ತಡೆಯುಂಟಾದ ಘಟನೆ ನಡೆದಿದೆ.
ಮೂಡುಬಿದಿರೆ-ಬಂಟ್ವಾಳ ರಸ್ತೆಯ ಬಿರಾವಿನ ಗಾಜಿಗಾರ ಪಲ್ಕೆಯಲ್ಲಿ ಈ ಘಟನೆ ಸಂಭವಿಸಿದ್ದು, ಮರ ಬೀಳುವ ಸಂದಭ೯ದಲ್ಲಿ ಕಾರೊಂದು ರಸ್ತೆಯಲ್ಲಿ ಹೋಗುತ್ತಿದ್ದು ಅದರ ಮೇಲೆಯೇ ಮರದ ಗೆಲ್ಲು ಬಿದ್ದು ಜಖಂಗೊಂಡಿದ್ದು ಕಾರಿನಲ್ಲಿದ್ದವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
0 Comments