ಬಿರುಗಾಳಿ: ಪಡುಮಾರ್ನಾಡು ಪರಿಸರದಲ್ಲಿ ಮನೆಗಳಿಗೆ ಹಾನಿ, ಧರೆಗುರುಳಿದ ಕಂಗುಗಳು

ಜಾಹೀರಾತು/Advertisment
ಜಾಹೀರಾತು/Advertisment

 ಬಿರುಗಾಳಿ: ಪಡುಮಾರ್ನಾಡು ಪರಿಸರದಲ್ಲಿ ಮನೆಗಳಿಗೆ ಹಾನಿ, ಧರೆಗುರುಳಿದ ಕಂಗುಗಳು

ಮೂಡುಬಿದಿರೆ: ಮಂಗಳವಾರ ಸಂಜೆ ವೇಳೆಗೆ ಬೀಸಿದ ಬಿರುಗಾಳಿಗೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಮನೊಟ್ಟು ಪರಿಸರದಲ್ಲಿ ಮನೆಗಳಿಗೆ, ಶಾಲೆ ಹಾಗೂ ಯುವಕ ಮಂಡಲ ಕಟ್ಟಡಕ್ಕೆ ಹಾನಿಯುಂಟಾಗಿ ಅಪಾರ ನಷ್ಟವುಂಟಾಗಿದೆ.

ಬಿರುಗಾಳಿಗೆ ಅಮನೊಟ್ಟು ಪರಿಸರದಲ್ಲಿ ಕೆಲವು ಮನೆಗಳ ಹಂಚುಗಳು ಹಾರಿಹೋಗಿದ್ದು, ಕಂಗುಗಳು ಧರೆಗುರುಳಿವೆ. ಪಡುಮಾರ್ನಾಡು ಯುವಕ ಮಂಡಲ ಕಟ್ಟಡದ ಶೀಟುಗಳು ಹಾರಿ ಹೋಗಿದೆ.

ಪಡುಮಾರ್ನಾಡು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ,ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ಅವರು ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Post a Comment

0 Comments