ಕೊಡಂಗಲ್ಲು ಮಾರಿಪೂಜಾ ಉತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಕೊಡಂಗಲ್ಲು ಮಾರಿಪೂಜಾ ಉತ್ಸವ


ಮೂಡುಬಿದಿರೆ : ಇಲ್ಲಿನ ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಮಾರಿಪೂಜಾ ಉತ್ಸವವು ಜರಗಿತು.

ಮಂಗಳವಾರ ಬೆಳಿಗ್ಗೆ ದೇವಿಯ ಭಂಡಾರದೊAದಿಗೆ ಮೂಡುಬಿದಿರೆ ಕೈಕಂಬ ಕಟ್ಟೆಗೆ ತೆರಳಿ ಕಟ್ಟೆಯಲ್ಲಿ ದೇವಿಯ ಬೊಂಬೆ ಪ್ರತಿಷ್ಠೆ ನಡೆಯಿತು.

ರಾತ್ರಿ ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ ನಡೆಯಿತು. ಬಳಿಕ ಸಕಲ ಬಿರುದಾವಳಿಗಳೊಂದಿಗೆ ಬೊಂಬೆಯನ್ನು ಕ್ಷೇತ್ರಕ್ಕೆ ತರಲಾಯಿತು.

ಪಿಂಗಾರ ಕಲಾವಿದೆರ್ ತಂಡದಿAದ ಕದಂಬ ಹಾಸ್ಯಮಯ ನಾಟಕ ನಡೆಯಿತು. ಬುಧವಾರ ಸಂಜೆ ದೇವಿ ದರ್ಶನದ ಬಳಿಕ ಕೊಡಂಗಲ್ಲು ಕಾಡಿನಲ್ಲಿ ಬೊಂಬೆ ವಿಸರ್ಜನೆ ನಡೆಯಿತು.

ಆಡಳಿತ ಮಂಡಳಿ ಅಧ್ಯಕ್ಷ ದೇಜು, ಉಪಾಧ್ಯಕ್ಷ ಸಂತೋಷ, ಕಾರ್ಯದರ್ಶಿ ಸಂದೀಪ್ ಕೆ. ಜೊತೆ ಕಾರ್ಯದರ್ಶಿ ರಮೇಶ್ ಕೆ.ಸ್, ಜೊತೆ ಕಾರ್ಯದರ್ಶಿ ಪ್ರಕಾಶ್, ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.

Post a Comment

0 Comments