ಮೂಡುಬಿದಿರೆ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ *ವೃದ್ಧಾಪ್ಯವನ್ನು ಸುಂದರಗೊಳಿಸುವುದು ನಮ್ಮ ಕೈಯಲ್ಲಿದೆ : ಮುನಿರಾಜ ರೆಂಜಾಳ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆ

 *ವೃದ್ಧಾಪ್ಯವನ್ನು ಸುಂದರಗೊಳಿಸುವುದು ನಮ್ಮ ಕೈಯಲ್ಲಿದೆ : ಮುನಿರಾಜ ರೆಂಜಾಳ

ಮೂಡುಬಿದಿರೆ : ಸೂಯೋ೯ದಯದಂತೆ ಸೂಯ೯ಸ್ತವೂ ಅಷ್ಟೇ ಸುಂದರವಾಗಿರುತ್ತದೆ ಅದರಂತೆ ಬಾಲ್ಯದಂತೆ ವೃದ್ಧಾಪ್ಯವೂ ಚೆನ್ನಾಗಿರುತ್ತದೆ ಆದರೆ ಅದನ್ನು ಸುಂದರಗೊಳಿಸುವುದು ನಮ್ಮ ಕೈಯಲ್ಲಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು. 

ಅವರು ಶನಿವಾರ ಸಮಾಜ ಮಂದಿರದಲ್ಲಿ ನಡೆದ ಮೂಡುಬಿದಿರೆ ತಾಲೂಕು ಪಿಂಚಣಿದಾರರ ಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


 ಪೆನ್ಷನ್ಸ್ ಟೆನ್ಷನ್ ಇಲ್ಲದೆ ಬದುಕು ನಡೆಸುವುದು ಅತೀ ಅಗತ್ಯ ಅದಕ್ಕಾಗಿ ತಾವು ಯಾವುದಕ್ಕೂ ಚಿಂತೆ ಮಾಡಬೇಡಿ, ಅತಿಯಾಗಿ ನೀರು ಕುಡಿಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಪ್ರತಿದಿನ ವಾಕಿಂಗ್ ಮಾಡಿ, ಶ್ರಮಪಡಿ ಹಾಗೂ ಧನಾತ್ಮಕ ಚಿಂತನೆಗಳೊಂದಿಗೆ ಮನಸ್ಸನ್ನು ಶಾಂತ ರೀತಿಯಲ್ಲಿ ಇಟ್ಟುಕೊಂಡರೆ ಅರವತ್ತರ ನಂತರದ ಜೀವನ ಉತ್ತಮ ರೀತಿಯಲ್ಲಿ ಸಾಗುತ್ತದೆ ಎಂದರು.



 ಸಂಘದ ಅಧ್ಯಕ್ಷ ಟಿ. ಎನ್. ಕೆಂಬಾರೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಇರುವಷ್ಟು ದಿನ ಚೆನ್ನಾಗಿರಬೇಕು ಅದಕ್ಕಾಗಿ ಉತ್ತಮ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಮುಂದಿನ ದಿನಗಳಲ್ಲಿ ಎರಡು ಪ್ರವಾಸಗಳನ್ನು  ಕೈಗೊಳ್ಳಲಾಗುವುದು ಮತ್ತು ವಿವಿಧ ಕಾಯ೯ಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

 

50 ರ ವಿವಾಹ ವಾಷಿ೯ಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂಘದ ಉಪಾಧ್ಯಕ್ಷೆ ಪ್ರೇಮಾ. ಸಿ. ರಾವ್ ದಂಪತಿಯನ್ನು ಸನ್ಮಾನಿಸಲಾಯಿತು.


   ಚಂದ್ರಶೇಖರ ರಾವ್ ಎಡನೀರು, ನಿಕಟಪೂವ೯ ಅಧ್ಯಕ್ಷ ರಾಜಾರಾಮ್ ನಾಗರಕಟ್ಟೆ ಉಪಸ್ಥಿತರಿದ್ದರು. 


ಕಾಯ೯ದಶಿ೯ ಎಲ್. ಜೆ. ಫೆನಾ೯ಂಡಿಸ್ ವಾಷಿ೯ಕ ವರದಿ ಮಂಡಿಸಿದರು. ಸಂಘದ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಕೀನಾ ಸನ್ಮಾನಿತರನ್ನು ಪರಿಚಯಿಸಿದರು.

ಕೋಶಾಧಿಕಾರಿ ರಾಜು ಅವರು ಆಯವ್ಯಯ ಮಂಡಿಸಿದರು. ಶೇಖರ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು. ಸಹ ಕಾಯ೯ದಶಿ೯ ಜಾನಕಿ ವಂದಿಸಿದರು.

Post a Comment

0 Comments