ಬೆಲೆ ಏರಿಕೆ : ರಾಜ್ಯ ಸರಕಾರದ ವಿರುದ್ಧ ಏ.9ರಂದು ಮಂಗಳೂರಿನಲ್ಲಿ ಜನಾಕ್ರೋಶ ಯಾತ್ರೆ

ಜಾಹೀರಾತು/Advertisment
ಜಾಹೀರಾತು/Advertisment

 ಬೆಲೆ ಏರಿಕೆ : ರಾಜ್ಯ ಸರಕಾರದ ವಿರುದ್ಧ ಏ.9ರಂದು ಮಂಗಳೂರಿನಲ್ಲಿ ಜನಾಕ್ರೋಶ ಯಾತ್ರೆ 

ಮೂಡುಬಿದಿರೆ: ರಾಜ್ಯ ಸರಕಾರವು ಎಲ್ಲಾ ವಸ್ತುಗಳ ಬೆಲೆ ಏರಿಸಿದ್ದು ಇದರಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ ಇದರ ವಿರುದ್ಧ ಬಿಜೆಪಿ ಹಮ್ಮಿಕೊಂಡ ಜನಾಕ್ರೋಶ ರ್ಯಾಲಿಯು ಏ.9 ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾಹಿತಿ ನೀಡಿದರು.

 

  ಮಧ್ಯಾಹ್ನ 3 ಕ್ಕೆ ಜ್ಯೋತಿ ವೃತ್ತದಿಂದ ಜನಾಕ್ರೋಶ ಯಾತ್ರೆಯು ತಾಲೂಕು ಆಡಳಿತ ಸೌಧದವರೆಗೆ ನಡೆಯಲಿದ್ದು ಬಳಿಕ ನಡೆಯುವ ಸಮಾವೇಶದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕರಾದ ರವಿಕುಮಾರ್, ಸುನೀಲ್ ಕುಮಾರ್ ಮತ್ತಿತರರು ಮಾತನಾಡಲಿದ್ದಾರೆ.

 ಗ್ಯಾರಂಟಿ ಆಶ್ವಾಸನೆಗಳ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಅನುಷ್ಠಾನಗೊಳಿಸಲು ಅಸಾಧ್ಯವಾದುದರಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ದಿನ ಬಳಕೆಯ ವಸ್ತುಗಳು ಕೈಗೆಟುಕದಂತ್ತಾಗಿದ್ದು ಭವಿಷ್ಯದಲ್ಲಿ ಜನಸಾಮಾನ್ಯರು ಮತ್ತಷ್ಟು ಬಡತನದ ಕೂಪಕ್ಕೆ ತಲ್ಲಲ್ಪಡಲಿದ್ದಾರೆಂದು ಆತಂಕ ವ್ಯಕ್ತಪಡಿಸಿದ ಅವರು ಜನಾಕ್ರೋಶ ಯಾತ್ರೆಯಲ್ಲಿ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸುವಂತೆ ಮನವಿ ಮಾಡಿದರು.

 ಸರಕಾರಿ ಗುತ್ತಿಗೆಯಲ್ಲಿ ಶೇ.4 ರಷ್ಟನ್ನು ಮುಸ್ಲಿಂಮರಿಗೆ ನೀಡಿರುವುದು ಖಂಡನೀಯ. ಈ ಸರಕಾರ ಅಲ್ಪ ಸಂಖ್ಯಾತರ ಮತದಿಂದ ಮಾತ್ರ ಅಧಿಕಾರಕ್ಕೆ ಬಂದಿದ್ದಾರಾ? ಇದು ಅಲ್ಪಸಂಖ್ಯಾತರ ಸರಕಾರವಾ ಅಥವಿ ಜನರ ಸರಕಾರವಾ..? ಎಂದು ಪ್ರಶ್ನಿಸಿದರು.

  

  ಸ್ಪೀಕರ್ ತೀಪಿ೯ನ ವಿರುದ್ಧ ಕೋಟಿ೯ಗೆ : ವಿಧಾನಸಭೆಯ ಅಧಿವೇಶನದಲ್ಲಿ ಹನಿಟ್ರಾಫ್ ವಿಷಯದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದೇವೆ. ಸಚಿವರೇ ಹನಿಟ್ರಾಪ್ ನ ಬಗ್ಗೆ ಗಂಭೀರ ಆರೋಪ ಮಾಡಿದ್ದು ಈ ಬಗ್ಗೆ ಸ್ಪೀಕರ್ ಹನಿಟ್ರಾಪ್ ತನಿಖೆಗೆ ಆದೇಶ ಮಾಡಬೇಕಿತ್ತು ಅದು ಬಿಟ್ಟು ಶಾಸಕರನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಗೆ ಶಾಸಕರನ್ನು ಆರು ತಿಂಗಳು ಅಮಾನತು ಮಾಡುವ ಅಧಿಕಾರವಿಲ್ಲ. ಈ ಕುರಿತು ಎಲ್ಲಾ 18 ಮಂದಿಯೂ ಸ್ಪೀಕರ್ ಗೆ ಪತ್ರ ಬರೆಯಲಿದ್ದು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಕೋಟ್೯ ಮೊರೆ ಹೋಗುವುದಾಗಿ ತಿಳಿಸಿದರು.

 ಮಂಡಲಾಧ್ಯಕ್ಷ ದಿನೇಶ್ ಪುತ್ರನ್,  ಪ್ರ.ಕಾಯ೯ದಶಿ೯ಗಳಾದ ರಂಜಿತ್ ಪೂಜಾರಿ,  ಹರಿಪ್ರಸಾದ್, ನಗರಾಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪುರಸಭೆಯ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಬಿಜೆಪಿ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments