*ಶ್ರೀರಾಮ ನವಮಿಯ ಶುಭ ದಿನದಂದು ಸುಮಾರು 250 ಕ್ಕೂ ಅಧಿಕ ಭಜಕರಿಂದ ಮೂಡುಬಿದಿರೆ ಪೇಟೆಯಲ್ಲಿ ಮೊಳಗಿತು ಶ್ರೀರಾಮನಾಮ*.
ಶ್ರೀ ರಾಮ ನವಮಿ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ), ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸಹಯೋಗದಲ್ಲಿ ಶ್ರೀ ರಾಮ ನಾಮ ನಗರ ಸಂಕೀರ್ತನೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಿತು. ಉದ್ಯಮಿ ಶ್ರೀಪತಿ ಭಟ್, ಖ್ಯಾತ ವಕೀಲರಾದ ಜಯಪ್ರಕಾಶ್ ಭಂಡಾರಿ, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್ , ಬಿಜೆಪಿ ಯುವ ನಾಯಕ ಕುಮಾರ್ ಪ್ರಸಾದ್ , ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಶ್ರೀ ಗುರುಪ್ರಸಾದ್ ಹೊಳ್ಳ ದೀಪ ಪ್ರಜ್ವಲನೆಯ ಮೂಲಕ ಶ್ರೀ ರಾಮ ನಾಮ ನಗರ ಸಂಕೀರ್ತನೆಗೆ ಚಾಲನೆ ನೀಡಿದರು. ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಪ್ರಾರಂಭವಾಗಿ ಪುರ ಪ್ರವೇಶಿಸಿ ನಿಶ್ಮಿತಾ ಸರ್ಕಲ್ ಬಳಿ ತೆರಳಿ ಹಿಂದೆ ದೇವಸ್ಥಾನಕ್ಕೆ ಬಂದು ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ನಗರ ಸಂಕೀರ್ತನೆ ಸಂಪನ್ನಗೊಂಡಿತು.ಸಂಘಟನೆ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಸೇವೆ ನಡೆಯಿತು.
ಆದಿ ಕಲ್ಚರಲ್ ಅಕಾಡೆಮಿ ಮೂಡಬಿದಿರೆ, ಗಜಾನನ ಭಜನಾ ಮಂಡಳಿ ಒಂಟಿ ಕಟ್ಟೆ, ವಿಪ್ರ ಸಮಾಜ , ರಾಮಕ್ಷತ್ರಿಯ ಸೇವಾಸಂಘ, ಸತ್ಯನಾರಾಯಣ ಸೇವಾ ಸಮಿತಿ ಗಾಂಧಿನಗರ, ಸ್ವಾಮಿ ಶ್ರೀ ನಿತ್ಯಾನಂದ ಬಂಟರ ಮಹಿಳಾ ಭಜನಾ ಮಂಡಳಿ, ಮೂಡುಬಿದಿರೆ ಧರ್ಮಶಾಸ್ತ ಭಜನಾ ಮಂದಿರ,ಹಂಡೇಲು ಕಾಪಿಕಾಡ್ ಮಹಾಮಾಯಿ ಮಹಿಳಾ ಭಜನೆ ಮಂಡಳಿ ಕೊಡಂಗಲ್ಲು,ಶ್ರೀ ಗುರುರಾಘವೇಂದ್ರ ಕುಣಿತ ಭಜನಾ ಮಂಡಳಿ ಬನ್ನಡ್ಕ. ವಿಶ್ವಕರ್ಮ ಭಜನಾ ತಂಡ, ನಾಗಬ್ರಹ್ಮ ಭಜನಾ ಮಂಡಳಿ, ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸೇರಿದಂತೆ 12 ತಂಡಗಳು ನಗರ ಸಂಕೀರ್ತನೆಯಲ್ಲಿ ಭಾಗವಹಿಸಿದರು . ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್, ಟ್ರಸ್ಟಿ ರಂಜಿತ್ ಶೆಟ್ಟಿ ಹಾಗೂ ಜವನೆರ್ ಬೆದ್ರ ಭಕುತಿ ಭಜನಾ ವೃಂದ ಸಂಚಾಲಕ ಪ್ರಥಮ್ ಎಸ್ ಬನ್ನಡ್ಕ,ಜವನೆರ್ ಬೆದ್ರ ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ, ಸಂಘಟನಾ ಕಾರ್ಯದರ್ಶಿ ಶ್ರೀ ಗುರುಪ್ರಸಾದ್ ಬಾಬು ಪೂಜಾರಿ, ಜವನೆರ್ ಬೆದ್ರ ರಕ್ತ ನಿಧಿಯ ಸಂಚಾಲಕ ಮನು ಆಚಾರ್ಯ, ದೇವಳದ ಪ್ರಧಾನ ಅರ್ಚಕ ಶ್ರೀ ರಾಘವೇಂದ್ರ ಭಟ್, ಪ್ರಮುಖರಾದ ಅರುಣ್ ಕುಮಾರ್, ಸುರೇಶ್ ಕಾಯರಗುಂಡಿ , ,ಶ್ರೀ ರಂಜು ಮಿಜಾರ್ ,ಅಕ್ಷಯ್ ಕುಮಾರ್,ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಶ್ರೀಮತಿ ಸಹನಾ ನಾಯಕ್ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸಾರಿಕಾ ಹೆಗ್ಡೆ, ಸಹ ಸಂಚಾಲಕಿ ಸೌಮ್ಯ ಶ್ರೀಮತಿ ಅಮಿತಾ, ಶ್ರೀಮತಿ ಸುಕನ್ಯ, ಶ್ರೀಮತಿ ಸ್ಮಿತಾ ಹೊಳ್ಳ, ಶ್ರೀಮತಿ ಶೋಭಾಲತಾ ಹಾಗೂ ಮುಂತಾದವರು ಉಪಸ್ಥಿತರಿದ್ದರು
0 Comments