ಮನೆಯ ಹಟ್ಟಿಯಿಂದಲೇ ದನ ಕಳ್ಳತನ : ಓವ೯ನ ಬಂಧನ
ಮೂಡುಬಿದಿರೆ: ಕಳೆದ 10 ದಿನಗಳ ಹಿಂದೆ ತಾಲೂಕಿನ ಬಜರಂಗದಳದ ಮಾಜಿ ಸಂಚಾಲಕ ಬೆಳುವಾಯಿ ಗ್ರಾಮದ ಖಂಡಿಗ ದರ್ಖಸು ನಿವಾಸಿ ಸೋಮನಾಥ ಕೋಟ್ಯಾನ್ ರವರ ಮನೆಯ ಹಟ್ಟಿಯಿಂದ ದನಗಳನ್ನು ಕದ್ದೊಯ್ದ ಓವ೯ ಆರೋಪಿ ಪುತ್ತಿಗೆಯ ಮೊಹಮ್ಮದ್ ಆರೀಫ್ ( 25ವ.) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಅಂದು ರಾತ್ರಿ ಮನೆಯ ಹೊರಗೆ ನಾಯಿ ಬೊಗಳಿದ ಶಬ್ದಕ್ಕೆ ಮನೆಯ ಲೈಟ್ ಆನ್ ಮಾಡಿ ಹೊರಗೆ ಬಂದು ನೋಡಿದಾಗ ಸಿಲ್ವರ್ ಬಣ್ಣದ ಕಾರೊಂದು ಮನೆಯ ಹಿಂಭಾಗ ನಿಂತಿದ್ದು ಡ್ರೈವರ್ ಸೀಟ್ ನಲ್ಲಿ,, ಒಬ್ಬ ಕುಳಿತುಕೊಂಡು ಕಾರು ಸ್ಮಾರ್ಟ್ ನಲ್ಲಿಯೇ ಇರಿಸಿ, ಉಳಿದ ಇಬ್ಬರು ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ 2 ದನ ಮತ್ತು 1 ಕರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಕಾರಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ನೇತೃತ್ವದ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಓವ೯ ಆರೋಪಿ ಮೊಹಮ್ಮದ್ ಆಸಿಫ್ ನನ್ನು ಬಂಧಿಸಿದ್ದಾರೆ ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ, ಡಿಸಿಪಿಳಾದ ಸಿದ್ದಾರ್ಥ ಗೊಯಲ್ (ಕಾ&ಸು), ಶ್ರೀ ರವಿಶಂಕರ್ (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್. ಕೆ ರವರ ನಿರ್ದೇಶನದಂತೆ, ಈ ಕಾಯ೯ಚರಣೆ ನಡೆದಿದೆ.
0 Comments