ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು 9ನೇ ವರ್ಷದ ಯುಗಾದಿ ಸಂಭ್ರಮ 2025

ಜಾಹೀರಾತು/Advertisment
ಜಾಹೀರಾತು/Advertisment

 ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು 9ನೇ ವರ್ಷದ ಯುಗಾದಿ ಸಂಭ್ರಮ 2025 

ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.), ಮೂಡುಮಾರ್ನಾಡು ಇದರ ವತಿಯಿಂದ ವಿಘ್ನೇಶ್ವರ ಮಹಿಳಾ ಮಂಡಳಿ (ರಿ.), ಮೂಡುಮಾರ್ನಾಡು ಇವರ ಸಹಯೋಗದೊಂದಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಊರವರ ಸಹಕಾರದೊಂದಿಗೆ 9ನೇ ವರ್ಷದ ಯುಗಾದಿ ಸಂಭ್ರಮ 2025 ನಡೆಯಲಿದೆ.


ರಾಘು ಸಿ ಪೂಜಾರಿ ಮಾರ್ನಾಡು ಇವರ ಗೌರವ ಅಧ್ಯಕ್ಷತೆಯಲ್ಲಿ.

ಆಶಿಶ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜಯಪ್ರಕಾಶ್ ಹಿತ್ತಿಲು ಮನೆ ಇವರ ಪ್ರಧಾನ ಪೋಷಕತ್ವದಲ್ಲಿ , ಸ್ಥಳಿಯ ಸಂಘ ಸಂಸ್ಥೆ ಮತ್ತು ಮತ್ತು ಊರವರ ಅತ್ಯದ್ಭುತ ಸಹಕಾರದೊಂದಿಗೆ 2500 ಜನರ ನಿರೀಕ್ಷೆಯಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.


ಸಮಾಜಮುಖಿ ಕಾರ್ಯಕ್ರಮ,ಧಾರ್ಮಿಕ ಸಭಾ ಕಾರ್ಯಕ್ರಮಮತ್ತು ಸಾಂಸ್ಕೃತಿಕ ವೈಭವ ಮಾರ್ಚ್‌ 30. 2025 ಆದಿತ್ಯವಾರ ನಾಳೆ ಸಂಜೆ ಗಂಟೆ 6 ರಿಂದ 9ನೇ ವರ್ಷದ ಯುಗಾದಿ ಸಂಭ್ರಮ 2025 ವಿಘ್ನೇಶ್ವರ ಭಜನಾ ಮಂಡಳಿ ಬಳಿಯ ಪೆಂರ್ಕಾಡಿ ಮೈದಾನದಲ್ಲಿ ನಡೆಯಲಿದೆ. ಸಾಧಕರಿಗೆ ಸನ್ಮಾನ ,ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸೈನಿಕರಿಗೆ ಸನ್ಮಾನ, ಸಮಾಜಮುಖಿ ಕಾರ್ಯಕ್ರಮ ನಡೆಯಲಿದೆ.


ಸಾಯಿ ಮಾರ್ನಾಡು ಸೇವಾಸಂಘ (ರಿ.) ಪಡುಮಾರ್ನಾಡು, ಪವರ್ ಫ್ರೆಂಡ್ಸ್ ಬೆದ್ರ, ಸರ್ವೋದಯ ಫ್ರೆಂಡ್ಸ್ ಬೆದ್ರ ಹಾಗೂ ವಿಘ್ನೇಶ್ವರ ಫ್ರೆಂಡ್ಸ್ ಟ್ರಸ್ಟ್ (ರಿ.) ಮೂಡುಮಾರ್ನಾಡು ಇವರ ಜಂಟಿ ಆಶ್ರಯದಲ್ಲಿ ನೊಂದವರಿಗೆ ಸಹಾಯ ಹಸ್ತ ಸಾಂಸ್ಕೃತಿಕ ವೈಭವ ಊರಿನ ಹಾಗೂ ಮೂಡುಬಿದಿರೆ ಪರಿಸರದ ಆಯ್ದ ಕಲಾವಿದರಿಂದ “ನಾಟ್ಯ ಸೌಂದರ್ಯ”ಸಾಂಸ್ಕೃತಿಕ ವೈಭವ ನಡೆಯಲಿದೆ.



ವಿಶೇಷ ಪ್ರತಿಭೆಯಾದ ಜೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5ರ ಫೈನಲಿಸ್ಟ್ ಅಪೂರ್ವ ಮಾಳ ಮತ್ತು ವಿಶೇಷ ಆಕರ್ಷಣೆಯಾದ “ದಸ್ಕತ್” ತುಳುಚಿತ್ರ ನಿರ್ದೇಶಕರು ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಇವರು ಆಗಮಿಸಲಿದ್ದಾರೆ.

ವಿಶೇಷ ಪ್ರತಿಭೆಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರಸಿದ್ಧ ನ್ಯೂಸ್ ವರದಿಗಾರರಾದ

ವಾಸುದೇವ ಭಟ್ ಮಾರ್ನಾಡು ಹಾಗೂ ಖ್ಯಾತ ಗಾಯಕರಾದ ಪವನ್ ಮಾರ್ನಾಡು ಇವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ.


ರಾತ್ರಿ ಗಂಟೆ 10.30ಕ್ಕೆ ಶಾರದಾ ಆರ್ಟ್ಸ್ ಕಲಾವಿದರು (ರಿ.), ಮಂಜೇಶ್ವರ ಅಭಿನಯದ ಕಥೆ ಎಡ್ಡೆಂಡು ನಾಟಕ ನಡೆಯಲಿದೆ.

Post a Comment

0 Comments