*ಅಬ್ಬಕ್ಕ ಬ್ರಿಗೇಡ್ ವತಿಯಿಂದ ಯುಗಾದಿ ಆಚರಣೆ ಹಾಗೂ ಸತ್ಸಂಗ*
ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ವತಿಯಿಂದ ಯುಗಾದಿ ಹಬ್ಬದ ಆಚರಣೆ ಹಾಗೂ ಸತ್ಸಂಗ ಕಾರ್ಯಕ್ರಮ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ನಡೆಯಿತು,ಸನಾತನ ಸಂಸ್ಥೆಯ ಸೌ ಶ್ಯಾಮಲ ಸುರೇಶ್ ಸತ್ಸಂಗ ನಡೆಸಿಕೊಟ್ಟರು , ಎಲ್ಲಾ ಸದಸ್ಯರು ಬೇವು ಬೆಲ್ಲ ಹಂಚಿ ಯುಗಾದಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಯಿತು, ಅಬ್ಬಕ್ಕ ಬ್ರಿಗೇಡ್ನ ಸಂಚಾಲಕಿ ಶ್ರೀಮತಿ ಸಹನಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸಾರಿಕಾ ಹೆಗಡೆ, ಸಹ ಸಂಚಾಲಕರಾದ ಸೌಮ್ಯ, ಪ್ರಮುಖರಾದ ಗೀತಾ ಆಚಾರ್ಯ ,ಸುಕನ್ಯ, ಅಮಿತಾ ಬನ್ನಡ್ಕ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಜವನೇರ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ, ಟ್ರಸ್ಟಿ ರಂಜಿತ್ ಶೆಟ್ಟಿ ಭಾಗವಹಿಸಿದ್ದರು.
0 Comments