ಪವರ್ ಫ್ರೆಂಡ್ಸ್ ಬೆದ್ರದಿಂದ "ಯುಗಾದಿ ಸಂಭ್ರಮ" *ಅಂಗನವಾಡಿ ಕಾಯ೯ಕತೆ೯ಯರಿಗೆ ಉಡುಗೊರೆಯ ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

 ಪವರ್ ಫ್ರೆಂಡ್ಸ್ ಬೆದ್ರದಿಂದ "ಯುಗಾದಿ ಸಂಭ್ರಮ"

*ಅಂಗನವಾಡಿ ಕಾಯ೯ಕತೆ೯ಯರಿಗೆ ಉಡುಗೊರೆಯ ಕೊಡುಗೆ

 ಮೂಡುಬಿದಿರೆ : ನಮ್ಮ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿ ತಮ್ಮಲ್ಲಿ ಮಾನವೀಯತೆ ಮತ್ತು ಸಹಕಾರದ ಮನೋಭಾವವನ್ನು ಮೂಡಿಸಿರುವ ಅಂಗನವಾಡಿ ಶಿಕ್ಷಕಿಯರನ್ನು ಗುರುತಿಸಿ ಅವರಿಗೆ ಉಡುಗೊರೆಯನ್ನು ನೀಡುವ ಮೂಲಕ ಪವರ್ ಫ್ರೆಂಡ್ಸ್ ಬೆದ್ರ ಈ ಬಾರಿ ಯುಗಾದಿ ಸಂಭ್ರಮವನ್ನು ಆಚರಿಸಿದೆ.


 ಸಮಾಜಮುಖಿ ಕಾಯ೯ಗಳನ್ನು ಕೈಗೊಳ್ಳುವ ಮೂಲಕ ಸಮಾಜದ ಕಟ್ಟ ಕಡೆಯ ಜನರಿಗೂ ತಲುಪಿರುವ ಈ ಸಂಘಟನೆಯು ಕಳೆದ 9 ವಷ೯ಗಳಿಂದ ಮೂಡುಬಿದಿರೆಯ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು, ಶ್ರಮಿಕರನ್ನು ಗುರುತಿಸಿ ಗೌರವಿಸಿ, ಸಾವ೯ಜನಿಕರಿಗೆ ಬೇವು-ಬೆಲ್ಲ ಜತೆಗೆ ಪಾಯಸವನ್ನು ಹಂಚಿ ಯುಗಾದಿ ಸಂಭ್ರಮವನ್ನು ಆಚರಿಸುತ್ತಾ ಬರುತಿತ್ತು.

ಆದರೆ ಈ ಬಾರಿ 27 ಮಂದಿ ಅಂಗನವಾಡಿ ಕಾಯ೯ಕತೆ೯ಯರಿಗೆ, ಸಹಾಯಕಿಯರಿಗೆ ಉಡುಗೊರೆಯನ್ನು ನೀಡಿ ಸಂಭ್ರಮಿಸಿತು.

  ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಕಾಯ೯ಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪವರ್ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ವಿನಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

 ವಕೀಲ ಶರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮೂಡುಬಿದಿರೆಯಲ್ಲಿರುವ ದೇವಸ್ಥಾನಗಳು ಈ ವಷ೯ ಬ್ರಹ್ಮಕಲಶೋತ್ಸವವನ್ನು ಕಂಡಿವೆ ಆದ್ದರಿಂದ ಮುಂದಿನ ದಿನಗಳು ಸುಭೀಕ್ಷೆಯ ದಿನಗಳಾಗಲಿವೆ. ಪವರ್ ಫ್ರೆಂಡ್ಸ್ ಸಂಘಟನೆಯು ಉತ್ತಮ ಕಾಯ೯ಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಈ ಬಸ್ ನಿಲ್ದಾಣದಲ್ಲಿ ದುಡಿಯುವ ವಗ೯ವಿದೆ ಅವರಿಗೆ ಈ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.

  ಅಂಗನವಾಡಿ ಕಾಯ೯ಕತೆ೯ಯರ ಪರವಾಗಿ ಮಾತನಾಡಿದ ಶೋಭಾ ಅವರು ನಾವು ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಂಡಿದ್ದೇವೆ ಆದರೆ ಧಾಮಿ೯ಕ ಹಬ್ಬದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದೇವೆ. ಈ ಸಂಘಟನೆಯು ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕಯ೯ಗಳ ಕೊರತೆಗಳಿದ್ದಾಗ ಶೀಘ್ರವಾಗಿ ಸ್ಪಂದಿಸಿದೆ. ಈ ಹಬ್ಬದ ಸಂದಭ೯ದಲ್ಲಿ ನಮಗೆ ಸಹೋದರರಿಂದ ಉಡುಗೊರೆಯನ್ನು ಪಡೆದಂತಹ ಅನುಭವವಾಗಿದೆ ಎಂದ ಅವರು ನಿಮ್ಮ ದುಡಿಮೆಯ ಜತೆಗೆ ಹೆಚ್ಚಿನ ಅಭಿವೃದ್ಧಿಯೂ ಆಗಲಿ ಎಂದು ಶುಭ ಹಾರೈಸಿದರು. 

ವಾಡ್೯ ಸದಸ್ಯ ರಾಜೇಶ್ ನಾಯ್ಕ್, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ಕುಮಾರ್ ಪೂಜಾರಿ, ಸುದಶ೯ನ್ ಶೆಟ್ಟಿ, ಧೀರಾಜ್ ಕೊಳಕೆ, ನಿವೃತ್ತ ಪೊಲೀಸ್ ಅಧಿಕಾರಿ ರಾಜಾರಾಮ್ ನಾಗರಕಟ್ಟೆ, ಸಂಘಟನೆಯ ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

 ಪವರ್ ಫ್ರೆಂಡ್ಸ್ ಬೆದ್ರದ ಉಪಾಧ್ಯಕ್ಷ ಜಯಪ್ರಕಾಶ್ ಭಂಡಾರಿ ಸ್ವಾಗತಿಸಿದರು. ಗುರುಪ್ರಸಾದ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments