ಮೂಡುಬಿದಿರೆಗೆ ರಾಮನವಮಿ ರಥಯಾತ್ರೆ
ಮೂಡುಬಿದಿರೆ : ಕೇರಳದ ಮಲ್ಲಪುರಂ ಜಿಲ್ಲೆಯ ಹನುಮಾಶ್ರಮದಿಂದ ಹೊರಟ ಶ್ರೀ ರಾಮ ನವಮಿ ರಥಯಾತ್ರೆಯು ಶನಿವಾರ ರಾತ್ರಿ ಮೂಡುಬಿದಿರೆಗೆ ಆಗಮಿಸಿತು. ಅಲಂಗಾರು ಸತ್ಯನಾರಾಯಣ ಕಟ್ಟೆಯ ಬಳಿಯಿಂದ ಸ್ವಾಗತಿಸಲಾಯಿತು. ಶ್ರೀ ರಾಮ ನವಮಿ ರಥ ಯಾತ್ರಾ ಸಮಿತಿಯ ಪರವಾಗಿ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿಯವರು ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಸ್ವಾಗತಿಸಿ ಬರಮಾಡಿಕೊಂಡರು.
ರಥಯಾತ್ರೆಯ ಶೋಭಾಯಾತ್ರೆಗೆ ಹಿರಿಯ ಸಹಕಾರಿ ಧುರೀಣರಾದ ಎಂ. ದಯಾನಂದ ಪೈಯವರು ರಥದಲ್ಲಿನ ಶ್ರೀ ಸೀತಾಪತಿ ಶ್ರೀ ರಾಮಚಂದ್ರ ದೇವರ ಪ್ರತಿಮೆಗೆ ಪುಷ್ಪವೃಷ್ಟಿ ಮಾಡಿ ಚಾಲನೆ ನೀಡಿದರು.
ಶಾಸಕ ಉಮಾನಾಥ ಕೊಟ್ಯಾನ್, ಸಮಿತಿಯ ಸಂಚಾಲಕ ಎಂ ಬಾಹುಬಲಿ ಪ್ರಸಾದ್, ಉಪಾಧ್ಯಕ್ಷ ಎಂ ದಯಾನಂದ ಪೈ, ಕಾರ್ಯದರ್ಶಿ ಶಾಂತಾರಾಮ ಕುಡ್ವ, ಸಹಕಾರ್ಯದರ್ಶಿ ಶಿವ ಭಂಡಾರ್ಕರ್, ಕೋಶಾಧ್ಯಕ್ಷ ಎಂ. ರಾಘವೇಂದ್ರ ಭಂಡಾರ್ಕಾರ್, ಗಣೇಶ್ ಪೈ ಅಲಂಗಾರು, ವೇಣುಗೋಪಾಲ ಭಟ್, ಸಹಕಾರ ಭಾರತೀಯ ಧುರೀಣ ಭರತ್ ಶೆಟ್ಟಿ, ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ, ಹನುಮಾಶ್ರಮದ ಮೂವತ್ತು ಮಂದಿ ಪರಿಚಾರಕರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಸ್ವರಾಜ್ಯ ಮೈದಾನದಲ್ಲಿ ನಡೆದ ಸಾರ್ವಜನಿಕ ಶನಿ ಪೂಜಾ ವಠಾರಕ್ಕೆ ರಥಯಾತ್ರೆಯು ಆಗಮಿಸಿತು.
ಚೆಂಡೆ ವಾದನ, ವಾದ್ಯಗಳು, ಬಾಲಕಿಯರ ಕುಣಿತ ಭಜನೆ, ಭಕ್ತ ವ್ರಔದದ ಜಯ ಘೋಷಗಳು ಶೋಭಯಾತ್ರೆಗೆ ಮತ್ತಷ್ಟು ಮೆರುಗನ್ನು ನೀಡಿತು.
0 Comments