ಎಕ್ಸಲೆಂಟ್ ಸಿಬಿಎಸ್ಇ ಕಿಂಡರ್ ಗಾಡ೯ನ್ ಪುಟಾಣಿ ವಿದ್ಯಾಥಿ೯ಗಳಿಗೆ ಚಿಣ್ಣರ ಪ್ರಶಸ್ತಿ ಪ್ರಧಾನ
ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಯುಕೆಜಿ ತರಗತಿಯ ಪುಟಾಣಿ ವಿದ್ಯಾಥಿ೯ಗಳಿಗೆ ಚಿಣ್ಣರ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಖ್ಯಾತ ಮಕ್ಕಳತಜ್ಞ ಡಾ. ಟಿ. ವಸಂತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳ ಮನಸ್ಸು ಸೂಕ್ಷ್ಮವಾದುದು. ಎಳೆಯ ವಯಸ್ಸಿನಲ್ಲಿ ಮಕ್ಕಳ
ಬೆಳವಣಿಗೆಗೆ ಬೇಕಾದ ಎಲ್ಲಾ ಚೌಕಟ್ಟನ್ನು ರೂಪಿಸುವ ಜವಾಬ್ದಾರಿ ಪ್ರತಿಯೊಬ್ಬ ಪೋಷಕರದ್ದೂ ಆಗಿರುತ್ತದೆ ಎಂದು ತಿಳಿಸಿದರು.
ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಶೈಕ್ಷಣಿಕ ನಿದೇ೯ಶಕ ಹಾಗೂ ಶೈಕ್ಷಣಿಕ ಮನಶಾಸ್ತ್ರಜ್ಞ ಬಿ. ಪುಷ್ಪರಾಜ ಅವರು
ಮಾತನಾಡಿ, ಎಳೆಯ ಮಕ್ಕಳ ಕಲಿಕೆಗೆ ಅನುಕೂಲಕರವಾದ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವುದರಿಂದ ಮಕ್ಕಳು ಹೆಚ್ಚು
ಕ್ರಿಯಾಶೀಲರಾಗಿ ಬೆಳೆಯಲು ಸಾಧ್ಯವಾಗುವುದು.ಅಲ್ಲದೆ ಎಳೆಯ ಮಕ್ಕಳಿಗೆ ಮಾತನಾಡುವ ಕೌಶಲ್ಯವನ್ನು ಬೆಳೆಸುವ ಹಲವು
ಚಟುವಟಿಕೆಗಳನ್ನು ನೀಡುವುದರಿಂದ ಅವರ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗುತ್ತದೆ ಎನ್ನುವುದನ್ನು ತಿಳಿಸಿದರು.
ಈ ಸಂದಭ೯ದಲ್ಲಿ ಎಕ್ಸಲೆಂಟ್ ಸಂಸ್ಥೆಯ ಕಾಯ೯ದಶಿ೯ ರಶ್ಮಿತಾ ಜೈನ್ ಅವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು,
ಸಂಯಮ, ಗೌರವಭಕ್ತಿಯ ಮನೋಭಾವವನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಕತ೯ವ್ಯ ಆಗಿದೆ ಎಂದು ಹೇಳುವ ಮೂಲಕ
ಎಳೆಯ ವಯಸ್ಸಿನ ಮಕ್ಕಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಾದರೆ ಮಗು ಬೆಳೆದಿರುವ ಸುತ್ತಮುತ್ತಲಿನ ಪರಿಸರ
ಉತ್ತಮವಾಗಿರಬೇಕು ಅನ್ನುವುದನ್ನು ಅಭಿಪ್ರಾಯಪಟ್ಟರು.
ಈ ಕಾಯ೯ಕ್ರಮದಲ್ಲಿ ಸಂಸ್ಥೆಯ ಶೈಕ್ಷಣಿಕ ನಿದೇ೯ಶಕ ಬಿ. ಪುಷ್ಪರಾಜ್, ಆಡಳಿತ ನಿದೇ೯ಶಕ ಬಿ. ಪಿ.ಸಂಪತ್
ಕುಮಾರ್, ಎಕ್ಸಲೆಂಟ್ ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಸುರೇಶ್, ಶೈಕ್ಷಣಿಕ ಸಂಯೋಜಕ ಪ್ರಸಾದ್ ಅವರು
ಉಪಸ್ಥಿತರಿದ್ದರು. ಕಾಯ೯ಕ್ರಮದಲ್ಲಿ ಯುಕೆಜಿ ಪುಟಾಣಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಟಾಣಿ ಅತುಲಿತ್ ಗ್ಯಾನ್ ಸ್ವಾಗತಿಸಿದರು. ಯುಕೆಜಿ ಪುಟಾಣಿ ರಕ್ಷಿತ್ ಕಾಮತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಯುಕೆಜಿ ವಿದ್ಯಾಥಿ೯ನಿಯರಾದ ಶ್ರುತಿಕ ಕಾಮತ್ ಹಾಗೂ ಅಮೂಲ್ಯ ಕಾಯ೯ಕ್ರಮ ನಿರೂಪಿಸಿದರು. ಆರಲ್
ಲೋಬೊ ವಂದಿಸಿದರು.
0 Comments