ದರೆಗುಡ್ಡೆ : ಚಪ್ಪರ ಮುಹೂತ೯ ಮತ್ತು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಮೂಡುಬಿದಿರೆ: ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಇಟಲ ದರೆಗುಡ್ಡೆ ಇದರ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂತ೯ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾಯ೯ಕ್ರಮವು ಸೋಮವಾರ ನಡೆಯಿತು.
ಉದ್ಯಮಿ ರಮಾನಂದ ಸಾಲ್ಯಾನ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕೆ. ನರಸಿಂಹ ತಂತ್ರಿ ಹಾಗೂ ರಾಘವೇಂದ್ರ ತಂತ್ರಿ ಮತ್ತು ಅಸ್ರಣ್ಣರಾದ ನಾಗರಾಜ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ಚಪ್ಪರ ಮುಹೂರ್ತ ನೆರವೇರಿತು.
ಕಾತಿ೯ಕ್ ಶಿತಾ೯ಡಿ ಅವರು ಕ್ಷೇತ್ರದ ಬಗ್ಗೆ ರಚಿಸಿರುವ ಹಾಡಿನ ಪೋಸ್ಟರ್ ನ್ನು ಇದೇ ಸಂದಭ೯ದಲ್ಲಿ ಬಿಡುಗಡೆ ಮಾಡಲಾಯಿತು.
ಪಣಪಿಲ ಅರಮನೆಯ ಅನುವಂಶೀಯ ಆಡಳಿತ ಮೋಕ್ತೇಸರ ಬಿ. ವಿಮಲ್ ಕುಮಾರ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಪರಾರಿಗುತ್ತು ಕೆ. ಪಿ. ಜಗದೀಶ್ ಅಧಿಕಾರಿ, ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷ ಸುಕೇಶ್ ಶೆಟ್ಟಿ ಎದಮಾರು, ಕಾಯ೯ದಶಿ೯ ಪ್ರಮೋದ್ ಅರಿಗ, ಶಿಮ್ಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಅಳಿಯೂರು ಬ್ರಹ್ಮ ಬೈದಕ೯ಳ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ಭಟ್ ಕಾನಂಗಿ, ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕ ಪೂರಣ್ ವಮ೯, ಜೀಣೋ೯ದ್ಧಾರ ಸಮಿತಿಯ ಕೋಶಾಧಿಕಾರಿ ಸುಧೀಶ್ ಕುಮಾರ್ ಆನಡ್ಕ
ಬ್ರಹ್ಮಕಲಶೋತ್ಸವ ಸಮಿತಿಯ ಕಾಯ೯ದಶಿ೯ ವಿಶ್ವನಾಥ ಕೋಟ್ಯಾನ್ ಹನ್ನೇರು ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿದರು. ಜತೆ ಕಾಯ೯ದಶಿ೯ ಅಶ್ವಥ್ ಪಣಪಿಲ ವಂದಿಸಿದರು.
ಕ್ಷೇತ್ರದಲ್ಲಿ ಏ. 23ರಿಂದ ಮೇ. 2ರವರೆಗೆ ಬ್ರಹ್ಮಕಲಶೋತ್ಸವ ಮತ್ತು ವಷಾ೯ವಧಿ ಜಾತ್ರೋತ್ಸವ ನಡೆಯಲಿದೆ.
0 Comments