ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ಅಧ್ಯಕ್ಷರಾಗಿ ಯತೀಶ್ ಅಂಚನ್ ಪುನರ್ ಆಯ್ಕೆ
ಮೂಡುಬಿದಿರೆ: ಪಡುಮಾರ್ನಾಡು ಅಮನಬೆಟ್ಟುವಿನ ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ನ ಅಧ್ಯಕ್ಷರಾಗಿ ಯತೀಶ್ ಅಂಚನ್ ಮಾರ್ನಾಡ್ ಅವರನ್ನು ಪುನಾರಾಯ್ಕೆ ಮಾಡಲಾಗಿದೆ. ಸಂಘದ ಸಭೆಯಲ್ಲಿ ಮುಂದಿನ ಎರಡು ವರ್ಷ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಭರತ್ ಕೆ.ಶೆಟ್ಟಿ(ಕಾರ್ಯದರ್ಶಿ), ರೋಹಿತ್ ಅಂಚನ್ ಮಾರ್ನಾಡ್( ಜೊತೆ ಕಾರ್ಯದರ್ಶಿ), ಪ್ರಜ್ವಲ್ ಪೂಜಾರಿ( ಕೋಶಾಧಿಕಾರಿ), ದಿನಕರ್ ಅಮೀನ್ ಮೂಡುಮಾರ್ನಾಡ್( ರಕ್ತದಾನ ಉಸ್ತುವಾರಿ), ಪ್ರಜ್ವಲ್ ಪೂಜಾರಿ( ಫೇಸ್‌ಬುಕ್-ಸಾಮಾಜಿಕ ಜಾಲತಾಣ ಜವಾಬ್ದಾರಿ), ಅನುಷ್ ಪೂಜಾರಿ( ಇನ್ಸಾ÷್ಟಗ್ರಾಂ-ಸಾಮಾಜಿಕ ಜಾಲತಾಣ ಜವಾಬ್ದಾರಿ), ಸುಜಲ್ ಪೂಜಾರಿ( ಪೋಸ್ಟರ್,ಆಮಂತ್ರಣ ಪತ್ರಿಕೆ ಜವಾಬ್ದಾರಿ) ಹಾಗೂ ಪತ್ರಿಕಾ ಮಾಧ್ಯಮ ಜವಾಬ್ದಾರಿಯನ್ನು ರಾಜೇಶ್ ಪುತ್ರನ್ ಅವರಿಗೆ ವಹಿಸಲಾಯಿತು.
0 Comments