'ವಿಜೇಶ್ ಕುಟುಂಬಕ್ಕೆ ₹20 ಲಕ್ಷ’
ನುಡಿನಮನದಲ್ಲಿ ನಿಧಾ೯ರ
ಮೂಡುಬಿದಿರೆ: ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗಾಗಿ ವಿವಿಧ ರೀತಿಯ ವೇಷ ಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಸ್ಪಂದಿಸುತ್ತಿದ್ದ ಬಜರಂಗದಳದ ಸಂಚಾಲಕ, ನೇತಾಜಿ ಬ್ರಿಗೇಡ್‌ನ ಟ್ರಸ್ಟಿ ಹಾಗೂ ಸಕ್ರಿಯ ಸದಸ್ಯರಾಗಿದ್ದರು ದಿ.ವಿಜೇಶ್ ನೆನಪಿಗಾಗಿ ಅವರ ಕುಟುಂಬಕ್ಕೆ ₹20 ಲಕ್ಷ ಆರ್ಥಿಕ ನೆರವು ನೀಡಲು ಸೋಮವಾರ ಸಮಾಜ ಮಂದಿರ ದಲ್ಲಿ ನಡೆದ విಜೀಶ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ನಿರ್ಧರಿಸಲಾಯಿತು.
ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಅವರ ಮನೆಯವರಿಗೆ ಆರ್ಥಿಕ ಶಕ್ತಿ, ಅತ್ಮಸ್ಥೆರ್ಯ ತುಂಬಿ ಅವರೊಂದಿಗೆ ನಾವಿದ್ದೇವೆ ಎಂದು ತೋರಿಸಿಕೊಡಬೇಕಾಗಿದೆ ಎಂದರು.
ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಮತ್ತು ಈದು ಬಲ್ಯೊಟ್ಟು ಕ್ಷೇತ್ರದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ವಿಜೇಶ್ ಅವರು ಸಮರ್ಪಣಾಭಾವದಿಂದ ಹಿಂದೂ ಸಮಾಜಕ್ಕೆ ಆದರ್ಶರಾಗಿದ್ದರು ಎಂದರು.
ಶಾಸಕ ಉಮಾನಾಥ ಕೋಟ್ಯಾನ್ `ಮಾತನಾಡಿ, ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ಅವರ ಮನೆಯವರಿಗೆ ₹5 ಲಕ್ಷ ನೀಡುವುದಾಗಿ ತಿಳಿಸಿದರು.
ವಿಶ್ವಹಿಂದೂ ಮಂಗಳೂರು ಪರಿಷತ್ತಿನ ವಿಭಾಗೀಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ
ಮಾತನಾಡಿ, ವಿಜೇಶ್ ಕುಟುಂಬಕ್ಕೆ ವಿಶ್ವಹಿಂದೂ ಪರಿಷತ್ ವತಿಯಿಂದ ₹15 ಲಕ್ಷ ನೆರವು ನೀಡುವುದಾಗಿ ತಿಳಿಸಿದರು.
ನವೀನ್ ಮೂಡುಶೆಡ್ಡೆ ಪ್ರಾಸ್ತಾವಿ ಕವಾಗಿ ಮಾತನಾಡಿದರು. ಗೋಪಾಲ್ ಶೆಟ್ಟಿಗಾರ್ ಕಾಯ೯ಕ್ರಮ ನಿರೂಪಿಸಿದರು. ಸುಚೇತನ್ ಜೈನ್ ವಂದಿಸಿದರು.
0 Comments