"ಶಾಂತಿ- ಆಹಿಂಸೆ -ಧರ್ಮ ಪಾಲನೆಯಿಂದ ಜೀವನ ಸಾರ್ಥಕ : ಡಾ. ಡಿ. ವೀರೇಂದ್ರ ಹೆಗ್ಗಡೆ "
ವಿಟ್ಲ : ಭರತ ಖಂಡದ ಪ್ರಾಚೀನ ಧರ್ಮವಾದ ಜೈನ ಧರ್ಮದ ಶಾಂತಿ, ಅಹಿಂಸೆ ಹಾಗೂ ಧರ್ಮ ಪಾಲನೆಯಿಂದ ಮಾನವನ ಜೀವನ ಸಾರ್ಥಕವಾಗಲಿದೆ ಎಂದು ಪದ್ಮಶ್ರೀ, ರಾಜ್ಯಸಭಾ ಸದಸ್ಯರು ಹಾಗೂ ರಾಜರ್ಷಿ ,ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ತಿಳಿಸಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ವಿಟ್ಲ ದಲ್ಲಿ ಶ್ರೀ ಚಂದ್ರನಾಥ ತೀರ್ಥಂಕರ ಬಸದಿಯ ಪಂಚ ಕಲ್ಯಾಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕತೆಯ ಇಂದಿನ ಕಾಲಘಟ್ಟದಲ್ಲಿ ಮಾನವನಿಗೆ ಶಾಂತಿ ಮತ್ತು ಅಹಿಂಸೆ ಪಾಲನೆ ಅಗತ್ಯ ಇದರಿಂದ ಜೀವನ ಸಾರ್ಥಕವಾಗಲಿದೆ ಅಲ್ಲದೆ ಮಾನವ ಆದರ್ಶ ಜೀವನ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಪಾವನ ಸನ್ನಿಧಿಯ ವಹಿಸಿ ಆಶೀರ್ವಚನ ನೀಡಿದ ಕಾರ್ಕಳ ದಾನಶಾಲಾ ಮಠದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಿತ್ಯ ಬಸದಿಗೆ ಭೇಟಿ ನೀಡುವ ಪದ್ಧತಿ ,ಮನೆಯಲ್ಲಿ ಸೋತ್ರ ಪಠಣ, ಮಂತ್ರ ಪಠಣ, ಕೀರ್ತನೆ, ಭಜನೆ ಗಳನ್ನ ಹಾಡುವ ಪದ್ಧತಿ ರೂಡಿಸಿ ಕೊಳ್ಳಬೇಕು ಎಂದರು.
ಮಂಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮೂಡುಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಾಸ್ತ್ರಗಳ ಪಾಲನೆ ಅಗತ್ಯ, ಅಜ್ಞಾನ ತೊಲಗಿಸಬೇಕು ಎಂದು ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು ಜೈನ ಧರ್ಮಗಳ ಸಂಬಂಧ ಆನೂನ್ಯವಾಗಿದೆ ಎಂದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ. ಹೇಮಾವತಿ. ವಿ. ಹೆಗಡೆ, ವಿಟ್ಲ ಅರಮನೆಯ ಬಂಗಾರ ಆರಸರು, ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಾ. ಧರ್ಮಸ್ಥಳ ಸುರೇಂದ್ರ ಕುಮಾರ್, ಉಪಾಧ್ಯಕ್ಷರು ,ಬೆಂಗಳೂರು ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾದ ಅನಿತ ಸುರೇಂದ್ರ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಅನುವಂಶಿಕ ಆಡಳಿತ ಮೊಕ್ತೇಸರ ಡಿ. ವಿನಯ್ ಕುಮಾರ್, ಪಂಚಕಲ್ಯಾಣ ಸಮಿತಿ ಅಧ್ಯಕ್ಷ ಜಿತೇಶಿ.ಎಂ ,ದರ್ಶನ್ ಜೈನ,ಆರಳ ರಾಜೇಂದ್ರ ಕುಮಾರ್, ಪಂಚಕಲ್ಯಾಣೋತ್ಸವ ಸೇವಾ ಸಮಿತಿಯ ರತ್ನರಾಜ ಶೆಟ್ಟಿ, ಕೆ.ಶೋಬಾಕರ್ ಬಲ್ಲಾಳ್, ಕೆ .ಭರತ್ ಬಲ್ಲಾಳ್ ,ರತ್ನಾಕರ್ ಜೈನ್, ಪುಷ್ಪರಾಜ್ ಹೆಗಡೆ ,ಸುದರ್ಶನ್ ಜೈನ್, ನೇಮಿರಾಜ ಆರಿಗ, ಸುಭಾಷ್ ಚಂದ್ರ ಜೈನ್ ,ಸತೀಶ್ ಪಡಿವಾಳ, ಶ್ರೀ ಮಂತರ್ ಜೈನ್ . ಸದಸ್ಯರಾದ ಪದ್ಮಾಕರ್ ಜೈನ್, ವಿನೋದ್ ಕುಮಾರ್, ವೇದಜ್ಞ, ಉದಯಕುಮಾರ್ ,ಪದ್ಮರಾಜ್ ಚಿಂದೆ ರವೀಶ್, ಸುದೇಶ್ ಕುಮಾರ್, ವಿ .ಮನೋಹರ್ ಶೆಟ್ಟಿ, ಅಜಿತ್.ಎಂ ,ಚಂದ್ರಶೇಖರ್.ಪಿ, ಸೇರಿದಂತೆ ಮಹಿಳಾ ಸಂಘಗಳು ,ಪದಾಧಿಕಾರಿಗಳು ,ಪುರೋಹಿತ ವರ್ಗ, ನಾಡಿನ ವಿವಿಧ ಗಳಿಂದ ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ : ಜೆ ರಂಗನಾಥ- ತುಮಕೂರು
0 Comments