ತಮಿಳುನಾಡು ಬಿಜೆಪಿಯ ಮಿಂಚಿನ ಸಂಘಟನಾ ಪರ್ವ-ಉಸ್ತುವಾರಿ ನಳಿನ್ ಕುಮಾರ್ ಕಟೀಲಿಗೆ ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ತಮಿಳುನಾಡು ಬಿಜೆಪಿಯ ಮಿಂಚಿನ ಸಂಘಟನಾ ಪರ್ವ-ಉಸ್ತುವಾರಿ ನಳಿನ್ ಕುಮಾರ್ ಕಟೀಲಿಗೆ ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿನಂದನೆ

ಭಾರತೀಯ ಜನತಾ ಪಾರ್ಟಿಯು ರಾಷ್ಟ್ರದಾದ್ಯಂತ ಸಂಘಟನಾ ಪರ್ವ ಅಭಿಯಾನವನ್ನು ನಡೆಸುತ್ತಿರುವುದು ಮಂಡಲ ಜಿಲ್ಲೆಯಿಂದ ರಾಜ್ಯದ  ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ನಿಮಿತ್ತ ತಮಿಳುನಾಡು ರಾಜ್ಯಕ್ಕೆ ಸಂಘಟನಾ ಪರ್ವದ ಉಸ್ತುವಾರಿಯಾಗಿ ನೇಮಕಗೊಂಡಿರುವ ಕರ್ನಾಟಕ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲು ರವರು ಸುಮಾರು ಒಂದು ತಿಂಗಳಿಗೂ ಅಧಿಕ ತಮಿಳುನಾಡಿನಲ್ಲಿ ಬೀಡು ಬಿಟ್ಟು ಪಕ್ಷ ಸಂಘಟನಾ ಕಾರ್ಯವನ್ನು ನಡೆಸಿದ್ದಾರೆ.

 ಅಂತಿಮವಾಗಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಂಘಟನಾ ಪರ್ವ ಬೈಠಕ್ ತೆಗೆದುಕೊಂಡು ಪಕ್ಷವನ್ನು ಸಂಘಟಿಸಿ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ರವರು ನಳಿನ್ ಕುಮಾರ್ ಕಟೀಲ್ ರವರನ್ನು ಅಭಿನಂದಿಸಿದ್ದಾರೆ.

 ಆದಿತ್ಯವಾರ ತಮಿಳುನಾಡಿನಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ನಳಿನ್ ಕುಮಾರ್ ಕಟೀಲು ರವರ ಸಂಘಟನಾ ಕಾರ್ಯವನ್ನು ಮೆಚ್ಚಿ ಅಣ್ಣಮಲೈ ರವರು ನಳಿನ್ ಕುಮಾರ್ ಕಟೀಲು ಅವರಿಗೆ ಸನ್ಮಾನ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments