*ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿ ಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ*
ತೀರ್ಥಹಳ್ಳಿ : ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಅಚಾರ್ಯ ಶ್ರೀ ಕುಂದ ಕುಂದಾಚಾರ್ಯ ತಪೋಭೂಮಿ ಶ್ರೀ ಕ್ಷೇತ್ರ ಕುಂದಾದ್ರಿ ಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ 14-1-2025 ನೇ ಮಂಗಳವಾರ ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರುಗಲಿದೆ .
ಕಲಿಕುಂಡ ಯಂತ್ರಾರಾಧನೆ, ಬ್ರಹ್ಮ ಯಕ್ಷ ಆರಧಾನೆ, ವಿಶೇಷ ಅಭಿಷೇಕ ಪೂಜೆ ಸಹಿತ ಅನೇಕ ದಾರ್ಮಿಕ ವಿಧಿಗಳ ಜೊತೆಗೆ ಜಿನ ಭಜನೆ , ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ , ದೀಪೋತ್ಸವ ನಡೆಯಲಿದೆ.
0 Comments