ಜ.12ರಂದು ಆಲಂಗಾರು ಬಾಲಯೇಸುವಿನ ವಾಷಿ೯ಕ ಹಬ್ಬ

ಜಾಹೀರಾತು/Advertisment
ಜಾಹೀರಾತು/Advertisment

 ಜ.12ರಂದು ಆಲಂಗಾರು ಬಾಲಯೇಸುವಿನ ವಾಷಿ೯ಕ ಹಬ್ಬ

ಮೂಡುಬಿದಿರೆ: 2009ರಲ್ಲಿ ಆಲಂಗಾರಿನ ಹೋಲಿ ರೋಜರಿ ಚಚ್೯ನಲ್ಲಿ ಧಮ೯ಗುರು ವಿನ್ಸೆಂಟ್ ಡಿ'ಸೋಜ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಪುಣ್ಯ ಕ್ಷೇತ್ರ ಬಾಲಯೇಸುವಿನ  ವಾರ್ಷಿಕ ಹಬ್ಬವು ಜ 12ರಂದು ಅಲಂಗಾರ್ ಚಚ್೯ನಲ್ಲಿ ನಡೆಯಲಿದೆ ಎಂದು

 ಚಚ್೯ನ ಧರ್ಮಗುರು ಎಂ ಮೆಲ್ವಿನ್ ನೊರೊನ್ಹಾ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.


ಈ ಕುರಿತು ಮಾಹಿತಿ ನೀಡಿದ ಅವರು ವಾರ್ಷಿಕ ಹಬ್ಬದ ಅಂಗವಾಗಿ 9 ದಿನಗಳ ನವೀನ ಪ್ರಾರ್ಥನೆಯು ಜ 3ರಿಂದ ಆರಂಭವಾಗಿದೆ.

ಜ11 ರಂದು ಸಂಜೆ 4ಗಂಟೆಗೆ ಹೊರಕಾಣಿಕೆಯು ಅಲಂಗಾರ್ ಜಂಕ್ಷನ್ ನಿಂದ ಚಚ್೯ ವರೆಗೆ ನಡೆಯಲಿದೆ. ಸಂಜೆ ದಿವ್ಯ ಬಲಿ ಪೂಜೆ ನವೀನ ಪ್ರಾರ್ಥನೆ ಮತ್ತು ಬಾಲಯೇಸುವಿನ ಮೆರವಣಿಗೆಯು ಅಲಂಗಾರ್ ಜಂಕ್ಷನ್ ನಿಂದ ನಡೆಯಲಿದ್ದು ಬಾಲಯೇಸುವಿನ ಸಂದೇಶವನ್ನು ಸಾರಿ ಮೊಂಬತ್ತಿಯೊಂದಿಗೆ ಚಚ್೯ ನ ತನಕ ನಡೆಯಲಿದೆ. ಜ 12 ರಂದು ಇಂಗ್ಲಿಷ್ ನಲ್ಲಿ ಬಲಿಪೂಜೆ ನಡೆಯಲಿದೆ. ಬಳ್ಳಾರಿ ಧರ್ಮಪ್ರಾಂತ ಧರ್ಮಧ್ಯಕ್ಷ ಅತಿವಂದನೀಯ ಹೆನ್ರಿಡಿಸೋಜ ಹಾಗೂ ಅನೇಕ ಧರ್ಮಗುರುಗಳು ಪಾಲೊಳ್ಳಲಿದ್ದಾರೆ ಭಕ್ತಾದಿಗಳಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು. 

ಪತ್ರಿಕಾಗೋಷ್ಠಿ ಯಲ್ಲಿ ಉಪಾಧ್ಯಕ್ಷ ಎಡ್ವಡ್೯ ಸೆರಾವೋ, ಕಾರ್ಯದರ್ಶಿ ಲಾರೆಸ್ಸ್ ಡಿಕುನ್ನ , ರಾಜೇಶ್ ಡಿಸೋಜ ಕಡಲಕೆರೆ ಉಪಸ್ಥಿತರಿದ್ದರು.

Post a Comment

0 Comments