"ಶ್ರೀ ಬಾಹುಬಲಿ ಟ್ರೋಫಿ - 2025 ವೇಣೂರು : ಕ್ರಿಕೆಟ್ ಪಂದ್ಯಾವಳಿ"
ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಶ್ರೀ ಬಾಹುಬಲಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಜೈನ ಬಾಂಧವರಿಗೆ 10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯ ಶ್ರೀ ಬಾಹುಬಲಿ ಟ್ರೋಫಿ -.೨೦೨೫ ವೇಣೂರಿನ ಇಂದ್ರ ಮೈದಾನದಲ್ಲಿ ನಡೆಯಿತು.
ಮೂಡಬಿದರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಮಹಾಸ್ವಾಮಿಗಳು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಕಾಲೇಜಿನ ಅಧ್ಯಕ್ಷ ಸುಮಂತ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು .
ಉಡುಪಿ -ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವಿನಯ್ ಹೆಗಡೆ ನಾರಾವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪದ್ಮoಭ ಸಮೂಹ ಸಂಸ್ಥೆಗಳ ಮಾಲೀಕ ಜಿನರಾಜ್ ಜೈನ್, ಜೈನ್ ಮಿಲನ್ ಅಧ್ಯಕ್ಷ ಸುಕುಮಾರ ಜೈನ್, ಬಾಹುಬಲಿ ಯುವಜನ ಸಂಘದ ಅಧ್ಯಕ್ಷ ಪ್ರಭಾಚಂದ್ರ ಜೈನ ,ಶಮಂತ್ ಕುಮಾರ ಜೈನ್ ,ಸತ್ಯಪ್ರಸಾದ.ವಿ .ಉಪಸ್ಥಿತರಿದ್ದರು.
-------------------------------------------------------
ವರದಿ: ಜೆ.ರಂಗನಾಥ ತುಮಕೂರು
0 Comments