" ಜೈನ ಧರ್ಮಕ್ಕೆ ಪ್ರಚಾರ ಅಗತ್ಯ : ಧರ್ಮಸ್ಥಳ ಸುರೇಂದ್ರ ಕುಮಾರ್"

ಜಾಹೀರಾತು/Advertisment
ಜಾಹೀರಾತು/Advertisment

" ಜೈನ ಧರ್ಮಕ್ಕೆ ಪ್ರಚಾರ ಅಗತ್ಯ : ಧರ್ಮಸ್ಥಳ ಸುರೇಂದ್ರ ಕುಮಾರ್"


 ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಪುರಾತನವಾದ ಜೈನ ಧರ್ಮ ಅಹಿಂಸೆ, ಶಾಂತಿ ಹೊಂದಿದ ಧರ್ಮವಾಗಿದ್ದು ಅಹಿಂಸಾ ಧರ್ಮವಾಗಿರುವ ಜೈನ ಧರ್ಮಕ್ಕೆ ಪ್ರಚಾರ ಅಗತ್ಯ ಎಂದು ಭಾರತೀಯ  ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷ ರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ತಿಳಿಸಿದರು.

 ಅವರಿಂದು ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ, ಇಲವಾಲ ಹೋಬಳಿ, ಗೊಮ್ಮಟಗಿರಿ ಮಹಾ ಮಸ್ತಕಾಭಿಷೇಕದ ಅಮೃತ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

 ಶ್ರವಣಬೆಳಗೊಳ, ವೇಣೂರು, ಕಾರ್ಕಳ ,ಧರ್ಮಸ್ಥಳ ಗಳಲ್ಲಿರುವ ಗೊಮ್ಮಟಮೂರ್ತಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ ನಮ್ಮಲ್ಲಿ 12 ವರ್ಷವೂ ಪಾದಪೂಜೆ ನಡೆಯುತ್ತದೆ, ನಮ್ಮ ಧರ್ಮಸ್ಥಳ ಟ್ರಸ್ಟ್ ನಿಂದ 350  ದೇಗುಲ ಗಳು,ಬಸದಿಗಳನ್ನು  ಜೀರ್ಣೋದ್ಧಾರ ಮಾಡಲಾಗಿದೆ. 36 ಬಸದಿಗಳನ್ನು  ಜೀರ್ಣೋದ್ಧಾರ ಮಾಡಲಾಗಿದೆ ಈ ಪೈಕಿ 16  ಗೋಮ್ಮಟೇಶ್ವರಗಳು ಸೇರಿವೆ ಇವನ್ನ ಸಂರಕ್ಷಣೆ ಮಾಡಲಾಗಿದೆ ಎಂದರು.


 ಶ್ರವಣಬೆಳಗೊಳದ ನಿಶಿದಿ ಕಾರ್ಯಕ್ರಮ ಇತಿಹಾಸದಲ್ಲಿ ದಾಖಲಾಗಿದೆ, 3 ಇಂಚಿಗೊಂದು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ, 15000 ಹೆಚ್ಚಿನ ಮಾವಿನ ಗಿಡಗಳನ್ನು ವಿತರಿಸಲಾಗಿದ್ದು, ವೃಕ್ಷ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

 ಜೈನ ಧರ್ಮ ಪುರಾತನವಾದ ಧರ್ಮವಾಗಿದ್ದು ಶಾಂತಿಗೆಹೆಸರಾಗಿದ್ದು, ಈ ಧರ್ಮವನ್ನು ಸಂರಕ್ಷಿಸಲು ಹೆಚ್ಚಿನ ಪ್ರಚಾರ ಅಗತ್ಯವಿದೆ ಎಂದು ಅವರು,  ಅಹಿಂಸಾ ವರದಿಗಳು ಹೆಚ್ಚು ಹೆಚ್ಚು ಪ್ರಚಾರವಾಗಬೇಕು ಎಂದರು.

 ಮಾಜಿ ವಿಧಾನ ಪರಿಷತ್ ಸದಸ್ಯ  ಗೋ. ಮಧುಸೂದನ್ ಮಾತನಾಡಿ, ಭರತನಿಂದ ಈ ದೇಶ ಭರತ ಖಂಡವಾಗಿದೆ , ಈತನಿಂದ ಭಾರತ ಎಂಬ ಹೆಸರು ಬಂದಿದೆ ,ಈ ದೇಶದ ಹೆಸರಿನಲ್ಲಿ ಜೈನ ಧರ್ಮ ಮೂಲ ಸಿದ್ಧಾಂತ ಅಡಗಿದೆ, ಈ ದೇಶದ ಪ್ರಜೆಯಾಗಿದ್ದು ಈ ದೇಶ ಜೈನಮಯವಾಗಿದೆ ಎಂದರು .ಶ್ರೀರಾಮ -ಭರತ ಬಾಹುಬಲಿ - ಭರತ ಕ್ಷತ್ರಿಯರಾಗಿದ್ದು, ಅಹಿಂಸಾ ವಾದಿಗಳು, ಭಾರತ  ಅಹಿಂಸಾ ವಾದ ದೇಶವಾಗಿದ್ದು ದೇಶವೇ ಜೈನಮಯವಾಗಿದೆ, ಅಹಿಂಸಾ ಪರಮೋ ಧರ್ಮವಾಗಿದೆ ಎಂದರು.


 ಪಾಕಿಸ್ತಾನ ,ಬಾಂಗ್ಲಾ ಗಳಲ್ಲಿ ರಕ್ತಮಯವಾಗಿ ಹಿಂಸೆ ತಾಂಡ ವಾಡುತ್ತಿರುವ ಬಗ್ಗೆ   ವಿಷಾದ ವ್ಯಕ್ತಪಡಿಸಿದವರು ,ವಿಶ್ವಕ್ಕೆ ಇಂದು ಶಾಂತಿ  ಅಹಿಂಸೆ ಅನಿವಾರ್ಯವಾಗಿದೆ, ಇದು ಜೀವನದ  ಲಕ್ಷ್ಯ  ಅಹಿಂಸೆಯಾಗಿದ್ದು ಇದೇ ಜ್ಞಾನ ಸಂಪ್ರದಾಯವಾಗಿದೆ ಎಂದರು.

 ಖಾರ ವೇಲ, ಚಂದ್ರಗುಪ್ತ ಮೌರ್ಯ, ಬಿಂದುಸಾರ, ಅಶೋಕ,  ಅಹಿಂಸೆಯಿಂದ ಖ್ಯಾತರಾದರು. ಮಗದ ,ಕಳಿಂಗ ಚಕ್ರವರ್ತಿ ಗಳು ಅಹಿಂಸೆ ಸಾರಿದರು  ಅರಿಹಂತರು, ಸಿದ್ದರು .ಆಚಾರ್ಯರು ನೆನಪು ಬೇಕಿದ್ದು ಧಾರ್ಮಿಕ ಪ್ರಜ್ಞೆಯಿಂದ ಮೇಲೆ ಬರಬೇಕು. ಇತರೆ ಧರ್ಮಗಳನ್ನು ಒಳ್ಳೆಯ ಹೃದಯವಂತಿಕೆಯಿಂದ ಕಾಣಲು  ವೈಶಾಲ್ಯತೆ ಅಗತ್ಯ ಎಂದಿರು.  ಜೈನ ಧರ್ಮ  "ಧರ್ಮ ಭೂಮಿ"ಯಲ್ಲಿ ಹುಟ್ಟಿದ್ದು ಪ್ರತಿಯೊಬ್ಬರು ಜೀವನ ಶೈಲಿ- ಸಿದ್ದಾಂತಗಳನ್ನು   ರೂಪಿಸಿಕೊಳ್ಳುವಂತೆ ಕರೆ ನೀಡಿದರು.


 ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ  ಅಭಿನವ ಚಾರು ಕೀರ್ತಿ ಭಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರವಣಬೆಳಗೊಳ ಹಾಗೂ ಮೈಸೂರಿನ ನಡುವೆ ಅವಿನಾಭಾವ ಸಂಬಂಧವಿದೆ ಬಾಹುಬಲಿ ಸಂದೇಶವನ್ನು ತ್ಯಾಗ, ಶಾಂತಿ ,ಅಹಿಂಸೆ, ಪ್ರಗತಿ ಇಂದು ವಿಶ್ವಕ್ಕೆ ಅಗತ್ಯವಿದೆ, ಮೈತ್ರಿ ಬಾವ ಅತಿ ಅಗತ್ಯ ವಿದ್ದು , ತ್ಯಾಗದ ಈ ಪ್ರತೀಕ ವಾದ ಬಾಹುಬಲಿಯ ನೆನಪು ಸಹಸ್ರ ವರ್ಷ ವಾದರೂ ನೆನಪಿದ್ದು ಈ ಕಾಲಘಟ್ಟದಲ್ಲಿ ತ್ಯಾಗ ಮತ್ತು ಹಿಂಸೆ ಅಗತ್ಯವಿದೆ ಬಾಹುಬಲಿ ಪೂಜನೆಯ ಅವರ ತತ್ವ ಸಂದರ್ಶಗಳನ್ನ ಮನಸ್ಸಿನಲ್ಲಿ ಅಳವಡಿಸಿಕೊಂಡು ಪೂಜ್ಯನಿಯರಾಗಬೇಕು ಇದಕ್ಕೆ ಸಂಕಲ್ಪ ಅಗತ್ಯ ಎಂದರು.

 ಮಂಗಲ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಸ್ವಸ್ತಿ ಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಬಾಹುಬಲಿ ತ್ಯಾಗ ,ಅಹಿಂಸೆ ,ಆದರ್ಶಗಳನ್ನ ಒಳಗೊಂಡ ವಿಗ್ರಹಗಳನ್ನು ನಿರ್ಮಿಸಿದ್ದಾರೆ. ಭರತನಿಂದ ಭಾರತವಾಗಿದೆ ಶ್ರೀ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸವಿದು, ಬಾಹುಬಲಿ   ಮಹಾನ್ ಯೋಧ, ಭರತ- ಬಾಹುಬಲಿ ಮಲ್ಲ ಯುದ್ಧ ,ಜಲಯುದ್ಧ, ಧರ್ಮ ಯುದ್ಧ, ಎಲ್ಲಾ ಯುದ್ಧಗಳನ್ನು  ಮಾಡಿ    ಬಾಹುಬಲಿ  ಜಯಗಳಿಸಿದರು . ಶಾಂತಿ ,ಅಹಿಂಸೆ ತ್ಯಾಗಮೂರ್ತಿಗಳಾದ ಬಾಹುಬಲಿ ವಿಗ್ರಹ ಈಗ ಬಹಳಷ್ಟು ಕಡೆ ನಿರ್ಮಾಣವಾಗುತ್ತಿದೆ ಎಂದವರು ,ಕ್ಷೇತ್ರದಲ್ಲಿ ಆಯುರ್ವೇದ ಆಸ್ಪತ್ರೆ , ಆಯುರ್ವೇದ ವನ,  ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ  ಅಗತ್ಯ ಎಂದರು.

ಹು

 ಲೋಕಕ್ಕೆ ಶಾಂತಿ ಅಗತ್ಯವಿದ್ದು ,ನೆರೆಯ ರಾಷ್ಟ್ರಗಳಲ್ಲಿ ಯುದ್ಧದ ಭಯವಿದೆ ,ಅಶಾಂತಿ ,ಅಧರ್ಮ ತಾಂಡವ ಮಾಡುತ್ತಿದೆ ಬಾಹುಬಲಿ ಪ್ರಾರ್ಥನೆಯಿಂದ ಲೋಕದಲ್ಲಿ ಶಾಂತಿ ಸಮೃದ್ಧಿ ನೆಲೆಸಿ ದೇಶದ ಪ್ರಗತಿಯಾಗಲಿ ಎಂದರು.

 ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸುತ್ತೂರು ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿಶ್ವರ ದೇಶಕೇಂದ್ರಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಬಾಹುಬಲಿ ತ್ಯಾಗದ ಮೂರ್ತಿಯಾಗಿದ್ದು ಭೂಮಿ, ಆಕಾಶ ,ಗಾಳಿ, ಗಿಡಮರಗಳ  ನಡುವೆ ನೆಲೆಸಿದ್ದಾರೆ, ಇದನ್ನು ಛೋಟಾ ಶ್ರವಣಬೆಳಗೊಳ ಎನ್ನುತ್ತಿದ್ದರು. ಇಲ್ಲಿನ ಬೆಟ್ಟ ಚಲಿಸುವ ರಥದ ಮಾದರಿಯಲ್ಲಿದ್ದು ಬಾಹುಬಲಿ ನೆನಪಿಗೆ ಬಂದಾಗ ಮಾತ್ರ ಭರತನು ನೆನಪಾಗುತ್ತದೆ ಶ್ರವಣಬೆಳಗೊಳದ ಚಾವುಂಡರಾಯರನ್ನು ನೆನಪಿಸುವಂತೆ ತ್ಯಾಗ ಮೂರ್ತಿಗೆ ಈಗ ಮಹಾ ಮಸ್ತಕಾಭಿಷೇಕ , ನಡೆಯುತ್ತಿದ್ದು ತ್ಯಾಗಭಾವ ಮನಸ್ಸಿನಲ್ಲಿ ಬೆಳೆಸಿಕೊಳ್ಳಬೇಕೆಂದರು.

 ಕಾರ್ಯಕ್ರಮ ಉದ್ಘಾಟಿಸಿದ ಮೇಘಾಲಯದ ಘನತೆ ವೆತ್ತ ರಾಜ್ಯಪಾಲರಾದ ಸಿ.ಎಚ್ .ವಿಜಯಶಂಕರ್ ಮಾತನಾಡಿ  ಆದಿಪುರುಷ ಬಾಹುಬಲಿ ಶ್ರೀ ಕ್ಷೇತ್ರವನ್ನು ತಪೋ ಭೂಮಿ ,ದೈವಭೂಮಿ, ಯಾಗಿಸಿದ್ದಾರೆ ಅವರು ಧಾರ್ಮಿಕ ನಂಬಿಕೆಗಾಗಿ ಅವರು ಧಾರ್ಮಿಕ ಕಾರ್ಯಗಳು ಅವಿಸ್ಮರಣೆಯ. ಬಾಹುಬಲಿ ತ್ಯಾಗದ ಮೂರ್ತಿ ಇಂದ್ರಿಯಗಳ ಮೇಲೆ ಜೀವನ ಸಾಧಿಸಿದ ಜೈನರು,  ಇಬ್ಬರೂ ಭರತದ್ವಯರಿಂದ ತ್ಯಾಗವನ್ನು ಕಾಣುತ್ತಿದ್ದು ,ಭರತ ಭೂಮಿ ,ಧರ್ಮ ಭೂಮಿ, ತ್ಯಾಗ ಭೂಮಿ ಯಾಗಿದೆ ಎಂದರು. 

ಇತಿಹಾಸ ಬಲ್ಲ ದವರು ಇತಿಹಾಸ ಸೃಷ್ಟಿಸಲಾರರು ಬದುಕು, ನೆಲ, ಪರಂಪರೆ ,ಜೀವನ, ಅನುಭವ ಗಳ ಪಾಲನೆ ಅಗತ್ಯ ಇದು ಮುಂದಿನ ಪೀಳಿಗೆಗೆ ವರದಾನವಾಗಲಿದೆ ,ಎಲ್ಲದಕ್ಕೂ ಒಗ್ಗಟ್ಟು, ಈ ಬಗ್ಗೆ ಆತ್ಮವಲೋಕನ ಅಗತ್ಯ .ಸಮಾಜಕ್ಕೆ ಇಂತಹ ಸಭೆ,  ಆತ್ಮವಲೋಕನದ ಸಭೆ  ಅಗತ್ಯ ಎಂದರು.  

 ಅಹಿಂಸೆ, ಶುದ್ಧ ಪ್ರಶಾಂತ ಪ್ರಿಯರು ಜೈನರು ಅವರ ತತ್ವ ಸಿದ್ಧಾಂತ ಪ್ರಶಾಂತವಾದವು, ಸಂಜೆ ಆಹಾರ ಧಾನ, ಯುದ್ಧದಾನ ,ಎಲ್ಲವನ್ನು ತ್ಯಾಗ ಮಾಡುತ್ತಾರೆ ಪ್ರಕೃತಿ ಪ್ರಿಯರಾಗಿದ್ದಾರೆ  ಎಂದು ,ಶಾಸಕ  ಎಂ.ಆರ್.

ತಂಗಾ ಅವರ ಶಿಸ್ತು ಬದ್ಧ ಜೀವನವನ್ನು ಸ್ಮರಿಸಿದರು.

 ಪ್ರಕೃತಿ- ಪರಿಸರ ವನ್ನು ಪ್ರೀತಿಸಬೇಕು ಈ ಶಾರೀರಿಕ ನೀತಿ ಜೈನ ಧರ್ಮದಲ್ಲಿ ಕಾಣುತ್ತಿದ್ದು ,ಈ ಭಾಗದಲ್ಲಿ ಜೈನ ಧರ್ಮದಲ್ಲಿ ನಾಮಧಾರಿಗಳನ್ನು  ಕಾಣುತ್ತಿದ್ದು  ಕಾಲ ,ಮೂಲಾ, ವಿಚಾರ ,ವ್ಯವಸ್ಥೆಗಳನ್ನು ಮೀರಿ ಅನ್ಯ ಧರ್ಮ ಸೇರಿದ್ದಾರೆ ,ಧರ್ಮಗಳ ಬೆಳವಣಿಗೆಗೆ ಸಭೆ ,ಸಮಾರಂಭಗಳು ಅಗತ್ಯ .ಸಮಾಜದ ಒಳಿತು ಧರ್ಮದ ರಕ್ಷಣೆಗೆ ಬಾಹುಬಲಿ ಸಿದ್ದಾಂತಗಳು ಅಗತ್ಯ .ಸಮಾಜದಲ್ಲಿನ ಅಮಂಗಳ ಗಳು ದೂರವಾಗಲಿ ಎಂದು ಅವರು, ಮೇಘಾಲಯ ರಾಜಭವನ ಮಾಂಸ ಹಾಗೂ ಮಧ್ಯದಿಂದ ಮುಕ್ತಗೊಳಿಸಿದ್ದೇನೆ ಎಂದರು.

 ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀ ಭಾನುಕೀರ್ತಿ ಭಟ್ಟಾರಕ ಶ್ರೀಗಳು, ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಧಾ ಕೆ .ಎಸ್ .ಶೃತಿ ,ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದ ಲತಾ ಸುದರ್ಶನ್ ,ವಂದನಾ ರಾಜೇಶ್ ,ಪ್ರಸನ್ನ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ  ಎಲ್.ಆರ್. ಮಹದೇವಸ್ವಾಮಿ ,ಉದ್ಯಮಿ ವಿನೋದ್ ಬಾಕ್ಲಿ ವಾಲಾ, ಭಾರತೀಯ ಜೈನ್ ಮಿಲನ ಮೈಸೂರು ವಿಭಾಗದ ಎಂ .ರತ್ನರಾಜು   , ಗೋಮ್ಮಟಗಿರಿ ಸೇವಾ ಸಮಿತಿಯ ಅಧ್ಯಕ್ಷ ಮನ್ಮಥರಾಜು, ತಹ ಶೀಲ್ದಾರ್ ಮಂಜುನಾಥ್ , ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ರತ್ನತ್ರೆಯ ಕ್ರಿಯೇಷನ್ ಡಾ. ನೀರಜಾ ನಾಗೇಂದ್ರ ಕುಮಾರ್

ಸೇರಿದಂತೆ ,ಗಂಗೋತ್ರಿ ಜೈನ್ ಮಿಲನ್, ಮೈತ್ರಿ   ಜೈನ್ ಮಿಲನ್ ಮಹಾವೀರ ಜೈನ ಮಿಲನ್ ಗಳು ಸೇರಿದಂತೆ ಮೈಸೂರು ವಿಭಾಗದ ಜೈನಮಿಲನ್ ಗಳು ಭಾಗವಹಿಸಿದವು.

 ಮೈಸೂರಿನ ಉದ್ಯಮಿ ವಿನೋದ್ ಬಾಕ್ಲಿ ವಾಲ ಶ್ರೀ ಗೋಮ್ಮಟಗಿರಿ ಬೆಟ್ಟಕ್ಕೆ ಪ್ರವೇಶ ದ್ವಾರ ಗೋಪುರ ನಿರ್ಮಿಸಿ ಕೊಟ್ಟಿದ್ದಾರೆ.

 ಪದ್ಮಶ್ರೀ ಮಹಿಳಾ ಸಮಾಜದ ಉಪಾಧ್ಯಕ್ಷರಾದ ಡಾ. ಪದ್ಮ ಶ್ರೀ ಧನ್ಯ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ನಿರ್ಮಲ ಪ್ರಾರ್ಥಿಸಿದರು .ಸ್ನೇಹ ಶ್ರೀ ಸ್ವಾಗತಿಸಿದರು .ಕುಮುದಾ ನಾಗಭೂಷಣ್  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿ. ,: ಜೆ. ರಂಗನಾಥ- ತುಮಕೂರು.

Post a Comment

0 Comments